ಇಲ್ಲಿದೆ ಸುಲಭವಾಗಿ ಮಾಡುವ ಗ್ರಿಲ್ ಚಿಕನ್ ರೆಸಿಪಿ, ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಾಗ್ರಿಗಳು:
ಚಿಕನ್ ಲೆಗ್ಸ್ ಪೀಸ್ – 2
ಶುಂಠಿ – 1 ಇಂಚು
ಬೆಳ್ಳುಳ್ಳಿ – 6 ಎಸಳು
ಖಾರದ ಪುಡಿ – 1 ಟೀ ಸ್ಪೂನ್
ಗರಂ ಮಸಾಲ – 1 ಟೀ ಸ್ಪೂನ್
ಸೋಯಾ ಸಾಸ್ – 1 ಟೇಬಲ್ ಸ್ಪೂನ್
ಕಾಳುಮೆಣಸು – 2 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಲಿಂಬೆಹಣ್ಣಿನ ಜೂಸ್ – 2ಟೇಬಲ್ ಸ್ಪೂನ್
ಎಣ್ಣೆ – 3 ಟೇಬಲ್ ಸ್ಪೂನ್
ಮಾಡುವ ವಿಧಾನ:
ಚಿಕನ್ ಹೊರತುಪಡಿಸಿ ಎಲ್ಲಾ ಪದಾರ್ಥಗಳನ್ನು ಬ್ಲೆಂಡರ್ನಲ್ಲಿ ಮ್ಯಾಶ್ ಮಾಡಿ ಇಡೀ. ಈಗ ಈ ಮಿಶ್ರಣಕ್ಕೆ ಚಿಕನ್ ಸೇರಿಸಿ, 3 ಗಂಟೆಗಳ ಕಾಲ ಬಿಡಿ.
ಗ್ರಿಲ್ ಪ್ಯಾನ್ ಅನ್ನು ಬೇಕಿಂಗ್ ಶೀಟ್‌ನಲ್ಲಿ ಇರಿಸಿ, ಚಿಕನ್ ತುಂಡುಗಳನ್ನು ಹಾಕಿ ಮತ್ತು ಪ್ರಿ ಹೀಟ್ ಮಾಡಿಕೊಂಡ ಒವೆನ್ ನಲ್ಲಿ 20 ನಿಮಿಷಗಳ ಕಾಲ ಬೇಯಿಸಿ. ನಂತರ ಫ್ಲಿಪ್ ಮಾಡಿ ಮತ್ತು ಇನ್ನೊಂದು 20 ನಿಮಿಷ ಬೇಯಿಸಿ ಮತ್ತು ನಿಮ್ಮ ರುಚಿಕರವಾದ ಗ್ರಿಲ್ಡ್ ಚಿಕನ್ ಸವಿಯಲು ಸಿದ್ಧ.