ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಆಯೋಧ್ಯೆಯಲ್ಲಿ ಬಿಜೆಪಿಗೆ ಸೋಲಾಗಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಮಹಾಭಾರತ ಖ್ಯಾತಿಯ ಭೀಷ್ಮ ಪಾತ್ರಧಾರಿ ಮುಖೇಶ್ ಖನ್ನಾ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.
ಜೂನ್ 4ರಂದು ಘೋಷಿಸಲಾದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಅವರು ಫೈಜಾಬಾದ್ ಕ್ಷೇತ್ರದಲ್ಲಿ ಸಮಾಜದ ಪಕ್ಷದ ಸೌಜೇಶ್ ಪ್ರಸಾದ್ ವಿರುದ್ಧ ಸೋಲು ಅನುಭವಿಸಿದ್ದರು.
ಈ ಕುರಿತು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡ ಮುಖೇಶ್ ಖನ್ನಾ, ಅಯೋಧ್ಯೆಯಲ್ಲಿನ ಚುನಾವಣೆಯಲ್ಲಿ ಬಿಜೆಪಿಯ ಸೋಲು ಭವ್ಯವಾದ ದೇವಾಲಯದ ಜೊತೆಗೆ ಸರ್ಕಾರ ಸುತ್ತಮುತ್ತಲಿನ ಜನ ಜೀವನವನ್ನು ಸುರಕ್ಷಿತಗೊಳಿಸಲು ಪ್ರಯತ್ನಿಸಬೇಕು ಎನ್ನುವುದನ್ನು ಕಲಿಸುತ್ತದೆ. ಲಕ್ಷಾಂತರ ಜನರು ಅಲ್ಲಿ ವಾಸಿಸುತ್ತಿದ್ದಾರೆ. ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ಇಲ್ಲಿ ಸಾಮಾನ್ಯ ಜನರನ್ನು ಬಿಜೆಪಿ ನಿರ್ಲಕ್ಷಿಸಿರುವುದು ಸೋಲಿಗೆ ಕಾರಣ ಎಂದು ತಿಳಿಸಿದ್ದಾರೆ.
ಅಯೋಧ್ಯೆ ಚುನಾವಣಾ ಸೋಲಿನಿಂದ ನಾವು ಕಲಿಯಬೇಕು. ಭವ್ಯ ಮಂದಿರದ ಜೊತೆಗೆ ಹತ್ತಿರದ ಪಟ್ಟಣವಾಸಿಗಳ ಜೀವನವನ್ನು ಅದ್ದೂರಿಯಾಗಿ ಮಾಡಲು ಪ್ರಯತ್ನಿಸಬೇಕು. ಕೋಟಿಗಟ್ಟಲೆ ಬಜೆಟ್ ನಲ್ಲಿ ರಾಮಮಂದಿರವಾಗಲಿ, ಚಾರ್ ಧಾಮವಾಗಲಿ, ಜೈಪುರದ ಬಳಿಯಿರುವ ಖಾತು ಶಾಮ್ ಮಂದಿರವಾಗಲಿ ಅಲ್ಲಿಯ ಜನರ ಸಮಸ್ಯೆಗಳ ಪರಿಹಾರಕ್ಕೆ ಒಂದಿಷ್ಟು ಕೋಟಿಗಳನ್ನು ಇಡಬೇಕು ಎಂದು ಹೇಳಿದ್ದಾರೆ.
ಈ ವರ್ಷದ ಜನವರಿಯಲ್ಲಿ ರಾಮ್ ಮಂದಿರ ಉದ್ಘಾಟನೆಯ ಪವಿತ್ರ ಸಮಾರಂಭವು ಅದ್ದೂರಿಯಾಗಿ ನೆರವೇರಿತ್ತು. ಈ ಬಳಿಕ ಅಯೋಧ್ಯೆ ಇರುವ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿಯ ಸೋಲು ಅನೇಕರಿಗೆ ದೊಡ್ಡ ಆಘಾತವಾಗಿದೆ.