ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಜೈಲು ಸೇರಿದ್ದು, ತನಿಖೆ ಮುಂದುವರಿದಿದೆ. ಇತ್ತ ರೇಣುಕಾಸ್ವಾಮಿಯ ಮೃತದೇಹ ದೊರೆತಿದ್ದು, ಅಂತ್ಯಸಂಸ್ಕಾರ ನೆರವೇರಿದೆ.
ಕೆಲಸಕ್ಕೆಂದು ಹೋದ ಮಗ ಹೆಣವಾಗಿ ಬಂದಿದ್ದಾನೆ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ. ಮೋಸ ಮಾಡಿ ನನ್ನ ಮಗನನ್ನು ಕರೆದುಕೊಂಡು ಹೋಗಿ ಸಾಯಿಸಿದ್ದಾರೆ. ಮಗನ ಮುಖಕ್ಕೆ, ಎದೆಗೆ, ಹೊಟ್ಟೆಗೆ ಹಾಗೂ ಗುಪ್ತಾಂಗಕ್ಕೆ ಒದ್ದು ಗಾಯ ಮಾಡಿದ್ದಾರೆ. ಥೂ ಮಾನವೀಯತೆ ಅನ್ನೋ ಪದಕ್ಕೆ ಅರ್ಥವೇ ಇಲ್ಲದಂತಾಗಿದೆಯಾ ಎಂದು ರೇಣುಕಾ ತಂದೆ ಕಣ್ಣೀರಿಟ್ಟಿದ್ದಾರೆ.
ಕೈಯಾರೆ ತೊಟ್ಟಿಲಿಗೆ ಹಾಕಿದ್ದೆ, ಇದೀಗ ನಾನೇ ಮಗನ ಮೇಲೆ ಕೈಯಾರೆ ಮಣ್ಣು ಹಾಕಿದ್ದೇನೆ. ನನ್ನ ಮಗ ಸತ್ತ ಹಾಗೆ ಆ ದರ್ಶನ್ ಕೂಡ ಸಾಯಲಿ ಎಂದು ರೇಣುಕಾ ತಾಯಿ ಶಾಪ ಹಾಕಿದ್ದಾರೆ. ಇತ್ತ ರೇಣುಕಾ ಪತ್ನಿ, ನಾನು ಗರ್ಭಿಣಿ, ನನ್ನ ಮಗುವಿಗೆ ಯಾರನ್ನು ಅಪ್ಪ ಎಂದು ತೋರಿಸಲಿ, ನನ್ನ ಗಂಡ ದರ್ಶನ್ ಫ್ಯಾನ್ ಕೂಡ ಆಗಿರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.