ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಆ್ಯಂಡ್ ಗ್ಯಾಂಗ್ನಿಂದ ಕೊಲೆಯಾಗಿದೆ ಎನ್ನಲಾದ ರೇಣುಕಾಸ್ವಾಮಿಯ ಮರಣೋತ್ತರ ಪರೀಕ್ಷೆಯ ರಿಪೋರ್ಟ್ ಲಭ್ಯವಾಗಿದೆ.
ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಹೊಡೆದಿರೋದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದ್ದು ಆ ಭಾಗದಲ್ಲಿ ರಕ್ತ ಸೋರಿಕೆಯಾಗಿದೆ. ಮರದ ಪೀಸ್ನಿಂದ ಹೊಡೆದಿದ್ದಕ್ಕೆ ಹೊಟ್ಟೆಯ ಭಾಗದಲ್ಲೂ ರಕ್ತ ಚಿಮ್ಮಿದೆ.
ತಲೆಗೆ ಹೊಡೆದಿದ್ದಾರೆ ಆದರೆ ರಕ್ತ ಸೋರಿಕೆಯಾಗಿಲ್ಲ. ಬೆನ್ನಿಗೆ, ಕೈ, ಕಾಲುಗಳಲ್ಲಿ, ಎದೆ ಭಾಗದಲ್ಲೂ ರಕ್ತ ಬಂದಿದೆ. ದೇಹಕ್ಕೆ ಆಘಾತವಾಗಿ ರಕ್ತ ಹೆಪ್ಪುಗಟ್ಟಿ ಸಾವಾಗಿದೆ. ಹಲ್ಲೆ ಮಾಡಿ ಹತ್ಯೆ ಮಾಡುವಾಗ ಮರದ ಪೀಸ್, ಬೆಲ್ಟ್ ಅನ್ನು ಬಳಸಿದ್ದಾರೆ. ದೇಹದಲ್ಲಿ 15 ಕಡೆಗಳಲ್ಲಿ ಗಂಭೀರವಾದ ಗಾಯಗಳಾಗಿವೆ. ಇನ್ನು ಕೊಲೆ ಮಾಡಿ ಮೃತದೇಹ ಬಿಸಾಕಿದ್ದರಿಂದ ಮುಖ ಮತ್ತು ದವಡೆಯನ್ನ ನಾಯಿಗಳು ಕಿತ್ತು ತಿಂದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ.