ಬೇಕಾಗುವ ಸಾಮಗ್ರಿಗಳು:
1 ಕಪ್ ಹಾಲಿನ ಪುಡಿ
3/4- ಕಪ್ ಸಕ್ಕರೆ ಪುಡಿ
2 ಚಮಚ ತುಪ್ಪ
1/2 – ಕಪ್ ಹಾಲು
ಏಲಕ್ಕಿ ಪುಡಿ ಸ್ವಲ್ಪ
ಮಾಡುವ ವಿಧಾನ :
ಮೊದಲು, ಬಾಣಲೆಯಲ್ಲಿ 1 ಚಮಚ ತುಪ್ಪವನ್ನು ಕರಗಿಸಿ, ನಂತರ ಹಾಲು ಮತ್ತು ಪುಡಿ ಮಾಡಿದ ಸಕ್ಕರೆ ಸೇರಿಸಿ. ಸಕ್ಕರೆ ಕರಗಿದ ನಂತರ, ಹಾಲಿನ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು ಯಾವುದೇ ಉಂಡೆಗಳು ಇಲ್ಲದೆ ಚೆನ್ನಾಗಿ ಮಿಶ್ರಣ ಮಾಡಿ.
ಮತ್ತೊಂದು ಚಮಚ ತುಪ್ಪವನ್ನು ಸೇರಿಸಿ ಮತ್ತು ತಳ ಬಿಡುವವರೆಗೂ ಮಿಕ್ಸ್ ಮಾಡುತ್ತಲೇ ಇರಿ. ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. ನಿಮ್ಮ ಕೈಗಳಿಗೆ ತುಪ್ಪವನ್ನು ಹಚ್ಚಿ, ಸಣ್ಣ ಉಂಡೆಯನ್ನು ರೂಪಿಸಿ ಅದನ್ನು ಪೇಡಾದ ಆಕಾರದಲ್ಲಿ ಹರಡಿ ಮತ್ತು ನಿಮ್ಮ ರುಚಿಕರವಾದ ಪೇಡಾ ಸವಿಯಲು ಸಿದ್ಧ.
Good