Monday, January 12, 2026

6 ವರ್ಷದ ಬಾಲಕಿ ಅಪಹರಿಸಿ ಹತ್ಯೆ: ಪೋಸ್ಟ್‌ಮಾರ್ಟಮ್ ವರದಿ ವೇಳೆ ಸತ್ಯ ಹೊರಕ್ಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವೈಟ್‌ಫೀಲ್ಡ್ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದ್ದ ಆರು ವರ್ಷದ ವಲಸೆ ಬಾಲಕಿ ಕಿಡ್ನಾಪ್ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮತ್ತೊಂದು ಶಾಕಿಂಗ್ ವಿಚಾರವನ್ನು ಬಹಿಂಗ ಪಡಿಸಿದ್ದಾರೆ. ಹತ್ಯೆಗೂ ಮುನ್ನ ಆರೋಪಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿ ಯೂಸುಫ್ ಮೀರ್ ನನ್ನು ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಯೂಸೂ‌ಫ್ ಮೀರ್ ಆರು ತಿಂಗಳ ಹಿಂದೆ ನಗರಕ್ಕೆ ಬಂದು ಸ್ಕ್ರ್ಯಾಪ್ ಸಂಗ್ರಹಕಾರನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮತ್ತು ಸಂತ್ರಸ್ತ ಬಾಲಕಿ ಕುಟುಂಬ ಪಟ್ಟಂದೂರು ಅಗ್ರಹಾರದಲ್ಲಿ ನೆರೆಹೊರೆಯವರಾಗಿದ್ದರು. ಘಟನೆಗೂ ಮೊದಲು ಸಂತ್ರಸ್ತೆಯ ಕುಟುಂಬ ಸದಸ್ಯರೊಂದಿಗೆ ಅವನಿಗೆ ಜಗಳವಿತ್ತು ಎನ್ನುವುದು ತಿಳಿದುಬಂದಿದೆ.

ಜನವರಿ 5 ರ ಬೆಳಿಗ್ಗೆ, ಬಾಲಕಿ ಮನೆಯ ಮುಂದೆ ಆಟವಾಡುತ್ತಿದ್ದಾಗ ಅವಳನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿ, ನಂತರ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಶವವನ್ನು ಗೋಣಿ ಚೀಲದಲ್ಲಿ ತುಂಬಿ, ತನ್ನ ಸ್ಕ್ರ್ಯಾಪ್ ಸಂಗ್ರಹಿಸುವ ಸೈಕಲ್‌ನಲ್ಲಿ ಸಾಗಿಸಿ, ನಲ್ಲೂರಹಳ್ಳಿಯ ದೇವಸ್ಥಾನದ ಬಳಿಯ ಚರಂಡಿಗೆ ಎಸೆದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!