Sunday, September 7, 2025

ದಾಂಪತ್ಯ ಜೀವನದಲ್ಲಿ ಬಿರುಕು: ಸ್ಯಾಂಡಲ್‌ವುಡ್‌ ನಟ ಅಜಯ್‌ ರಾವ್‌ ಮೊದಲ ರಿಯಾಕ್ಷನ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ ನಟ ಅಜಯ್‌ ರಾವ್‌ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎನ್ನುವ ಸುದ್ದಿ ಸದ್ಯ ಸಂಚಲನ ಸೃಷ್ಟಿಸಿದೆ, ಪತ್ನಿ ಸ್ವಪ್ನಾ ಕೋರ್ಟ್‌ ಮೆಟ್ಟಿಲೇರಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಆ ಮೂಲಕ 11 ವರ್ಷಗಳ ತಮ್ಮ ದಾಂಪತ್ಯ ಜೀವನ ಕೊನೆಗೊಳಿಸಲು ಮುಂದಾಗಿದ್ದಾರೆ. ಆದರೆ ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿದ ಅಜಯ್‌ ರಾವ್‌, ತಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿ ಅಚ್ಚರಿ ಮೂಡಿಸಿದ್ದಾರೆ.

ನನಗೆ ಈ ಬಗ್ಗೆ ಗೊತ್ತಿಲ್ಲ. ಪತ್ನಿ ಜತೆ ಮಾತನಾಡಿ ಹೇಳ್ತೀನಿ ಎಂದಿದ್ದಾರೆ. ಇತ್ತ ಸ್ವಪ್ನಾ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದು, ಯಾವುದೇ ಪ್ರತಿಕ್ರಿಯೆಗೆ ಸಿಕ್ಕಿಲ್ಲ. ಜತೆಗೆ ಸ್ವಪ್ನಾ ತಮ್ಮ ಹೆಸರಿನ ಮುಂದಿದ್ದ ಅಜಯ್‌ ರಾವ್‌ ಹೆಸರನ್ನು ಕಿತ್ತು ಹಾಕಿರುವುದು ಸಂದೇಹ ಮೂಡಿಸಿದೆ. ಅದಾಗ್ಯೂ ಡಿವೋರ್ಸ್‌ಗೆ ಖಚಿತ ಕಾರಣವೇನು ಎನ್ನುವುದು ತಿಳಿದು ಬಂದಿಲ್ಲ.

ಅಜಯ್‌ ರಾವ್‌ ಮತ್ತು ಸ್ವಪ್ನಾ ಪರಸ್ಪರ ಪ್ರೀತಿಸಿ 2014ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ 2019ರಲ್ಲಿ ಹೆಣ್ಣು ಮಗು ಜನಿಸಿದ್ದು, ಇದಕ್ಕೆ ಕಳೆದ ವರ್ಷವಷ್ಟೆ ಇವರು ನೂತನ ಮನೆಯ ಗೃಹ ಪ್ರವೇಶ ಸಮಾರಂಭವನ್ನು ಅದ್ಧೂರಿಯಾಗಿಯೇ ನಡೆಸಿದ್ದರು. ಅಜಯ್‌-ಸ್ವಪ್ನಾ ದಂಪತಿ ಅನ್ಯೋನ್ಯವಾಗಿಯೇ ಇದ್ದರು. ಆದರೆ ಇದ್ದಕ್ಕಿದ್ದಂತೆ ದೂರವಾಗಲು ನಿರ್ಧರಿಸಿದ್ದೇಕೆ ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಇದನ್ನೂ ಓದಿ