ಮೇಷ
ಮನೆಯಲ್ಲಿ ಹೊಂದಾಣಿಕೆ ಮುಖ್ಯ. ಅದರಿಂದ ಸಂಬಂಧ ಕೆಡದೆ ಉಳಿಯುವುದು. ಇಂದು ಖರ್ಚು ಹೆಚ್ಬಬಹುದು. ಸಾಲ ಕೊಟ್ಟರೆ ಮರಳಿ ಸಿಗುವುದು ಅನುಮಾನ.
ವೃಷಭ
ಅದೃಷ್ಟ ನಂಬಿ ಕೂರದಿರಿ. ನಿಮ್ಮ ಪ್ರಯತ್ನ ಮಾಡಿ. ಕುಟುಂಬ ಸದಸ್ಯರ ಬೆಂಬಲ ನಿಮ್ಮ ಉತ್ಸಾಹ ಹೆಚ್ಚಿಸುವುದು. ಅಸಾಧ್ಯವೆನಿಸಿದ ಕಾರ್ಯ ಸಾಧ್ಯ.
ಮಿಥುನ
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಹಣ್ಣು, ತರಕಾರಿ ಸೇವಿಸಿ. ಸಾಂಸಾರಿಕ ಸಮಸ್ಯೆ ನಿಮ್ಮ ಮೂಡ್ ಹಾಳು ಮಾಡಬಹುದು.
ಕಟಕ
ಸಣ್ಣಪುಟ್ಟ ಜಗಳದ ವೇಳೆ ತಾಳ್ಮೆ ವಹಿಸಿ. ವಿಕೋಪಕ್ಕೆ ಕೊಂಡೊಯ್ಯದಿರಿ. ಅನವಶ್ಯ ವಸ್ತು ಖರೀದಿಯ ಮೂಲಕ ಹಣ ವ್ಯಯ ಮಾಡುವುದನ್ನು ನಿಲ್ಲಿಸಿ.
ಸಿಂಹ
ವೃತ್ತಿಯ ಒತ್ತಡದಿಂದ ಹೊರಬಂದು ಇತರ ವಿಷಯಗಳತ್ತ ಗಮನ ಹರಿಸಿ. ಮನಸ್ಸು ಉಲ್ಲಾಸಗೊಳಿಸುವ ಚಟುವಟಿಕೆಯಲ್ಲಿ ತೊಡಗಿರಿ.
ಕನ್ಯಾ
ನಿಮ್ಮ ಬದುಕಿನಲ್ಲಿ ಬದಲಾವಣೆ ಅಗತ್ಯವಾಗಿದೆ. ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯದಿರಿ. ಅಂತಿಮವಾಗಿ ಉತ್ತಮ ಫಲ ಸಿಗುವುದು.
ತುಲಾ
ವೃತ್ತಿಯ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರೀತು. ಪ್ರತಿಕೂಲ ಪರಿಸ್ಥಿತಿ ಇದ್ದರೂ ಆಶಾವಾದ ಬಿಡಬೇಡಿ. ಎಲ್ಲ ಸರಿಯಾಗುವುದು.
ವೃಶ್ಚಿಕ
ಎಲ್ಲ ಕಾರ್ಯವನ್ನು ಪರಿಪೂರ್ಣವಾಗಿ ಮುಗಿಸುವಿರಿ. ಹೊಣೆಗಾರಿಕೆ ಹೆಚ್ಚಳ. ಸೂಕ್ತ ಬೆಂಬಲ ಸಿಗುವುದರಿಂದ ಅದರ ನಿಭಾವಣೆ ಸುಲಭ.
ಧನು
ಸಂಪತ್ತು ಹೆಚ್ಚಳದ ಹಾದಿಯಲ್ಲಿದ್ದೀರಿ. ನಿಮ್ಮ ಮನಸ್ಥಿತಿ ಇಂದು ಸರಿಯಾಗಿ ಇಲ್ಲದಿರುವುದರಿಂದ ವೃತ್ತಿಯಲ್ಲಿ ಉದಾಸೀನ ತೋರುವಿರಿ.
ಮಕರ
ಭಾವನಾತ್ಮಕ ವಿಷಯವು ನಿಮ್ಮ ನಿರ್ಧಾರದ ಮೇಲೆ ಪರಿಣಾಮ ಬೀರಬಹುದು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚು ಗಮನ ಕೊಡಬೇಕು.
ಕುಂಭ
ಆರೋಗ್ಯ ಸಮಸ್ಯೆ ಪರಿಹಾರ. ಆರ್ಥಿಕ ಬಿಕ್ಕಟ್ಟು ನಿವಾರಣೆ. ಖರೀದಿಯ ಯೋಜನೆಗೆ ಎಲ್ಲವೂ ಸುಗಮ. ಬಂಧುಗಳಿಂದ ಶುಭಸುದ್ದಿ ಕೇಳುವಿರಿ.
ಮೀನ
ಮಾನಸಿಕವಾಗಿ ನಿಮ್ಮಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾದೀತು. ಸವಾಲು ಎದುರಿಸಲು ಸಿದ್ಧ. ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವುದರಿಂದ ನೆಮ್ಮದಿ.