ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಒಂದು ವಾರದಿಂದ ಹವಾಮಾನದಲ್ಲಿ ಭಾರೀ ಬದಲಾವಣೆಯಾಗಿದೆ. ಒಂದೇ ದಿನದಲ್ಲಿ ಬಿಸಿಲು, ಮಳೆ ಹಾಗೂ ಚಳಿಯ ಅನುಭವವಾಗುತ್ತಿದೆ.
ಇದರಿಂದಾಗಿ ಹೆಚ್ಚಿನ ಮಂದಿಯಲ್ಲಿ ಆರೋಗ್ಯ ಸಮಸ್ಯೆ ಕಾಣಿಸುತ್ತಿದೆ. ಅದರಲ್ಲಿಯೂ ಮಕ್ಕಳಲ್ಲಿ ವೈರಲ್ ಫೀವರ್, ಕೆಮ್ಮು, ನೆಗಡಿ, ಶೀತ ಹಾಗೂ ತಲೆನೋವು ಬಾಧಿಸುತ್ತಿದೆ.
ನಗರದ ಆಸ್ಪತ್ರೆಗಳಲ್ಲಿ ಆಸ್ಪತ್ರೆಗೆ ದಾಖಾಲಾಗುವ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ವಯಸ್ಕರಿಂದ ಹಿಡಿದು ಮಕ್ಕಳವರೆಗೂ ಜ್ವರ, ಕೆಮ್ಮು, ಶೀತ, ಡೆಂಗ್ಯೂ, ಚಿಕೂನ್ ಗುನ್ಯಾ, ವಾಂತಿಯಂತಹ ಪ್ರಕರಣಗಳು ಹೆಚ್ಚಳವಾಗಿದ್ದು, ಆರೋಗ್ಯದ ಮೇಲೆ ನಿಗಾ ಇರಿಸುವಮಂತೆ ವೈದ್ಯರು ಸಲಹೆ ನೀಡಿದ್ದಾರೆ.
ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ರಸ್ತೆಬದಿಯ ಆಹಾರಗಳಿಗೆ ನೋ ಹೇಳಿ
ಮನೆಯ ಆಹಾರ, ಬಿಸಿಬಿಸಿ ಊಟ ಮಾಡಿ
ಹೆಚ್ಚು ನೀರು ಕುಡಿಯಿರಿ.
ದಿನದಲ್ಲಿ ಯಾವುದಾದರೂ ಒಂದು ವ್ಯಾಯಾಮ ಮಾಡಿ.
ಊಟದಲ್ಲಿ ಫೈಬರ್, ಪ್ರೋಟೀನ್ ಇರಲಿ, ಎಣ್ಣೆ ಹಾಗೂ ಮೈದಾ ಇಂದ ದೂರ ಇರಿ