ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ಅಂಡ್ ಗ್ಯಾಂಗ್‌ನಿಂದ ಕೊಲೆಯಾದ ಚಿತ್ರದುರ್ಗದ ರೇಣುಕಾ ಸ್ವಾಮಿ ಕುಟುಂಬಸ್ಥರನ್ನು ಇಂದು ಫಿಲ್ಮ್ ಚೇಂಬರ್ ತಂಡ ಭೇಟಿ ಮಾಡಿ ಸಂತ್ವಾನ ಹೇಳಿದರು.
ಈ ವೇಳೆ ಕುಟುಂಬಸ್ಥರಿಗೆ ಪಿಲ್ಮ್ ಚೇಂಬರ್ ವತಿಯಿಂದ 5 ಲಕ್ಷ ರೂ ನೀಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್‌ಎಂ ಸುರೇಶ್, ನಾವಿಲ್ಲಿಗೆ ಬಂದಿರೋದು ಸಂತಾಪಕ್ಕೆ ಅಷ್ಟೇ ಯಾವುದೇ ರಾಜೀ ಇಲ್ಲ. ನಮ್ಮ ಫಿಲ್ಮ್ ಚೇಂಬರ್ ವತಿಯಿಂದ ಐದು ಲಕ್ಷ ರೂಪಾಯಿ ನೀಡಿದ್ದೇವೆ. ಇಡೀ ಚಿತ್ರರಂಗ ಮುಂದೆಯೂ ಸಹ ನೊಂದ ಕುಟುಂಬದವರ ಜೊತೆ ನಿಲ್ಲಲಿದೆ. ಕುಟುಂಬಕ್ಕೆ ಐದು ಲಕ್ಷ ಸಾಂಕೇತಿಕವಾಗಿ ಕೊಡಲಾಗಿದೆ. ಮುಂದೆಯೂ ಇನ್ನೂ ಸಹಾಯ ಹೇಗೆ ಮಾಡಬೇಕು ಮಾಡ್ತಿವಿ. ಶಾಶ್ವತ ಪರಿಹಾರ ನೀಡಲು ನಿರ್ಧಾರ ಮಾಡುತ್ತೇವೆ. ಚಿತ್ರರಂಗ ಕ್ಷಮೆ ಕೇಳಲು ಇಲ್ಲಿಗೆ ಬಂದಿದ್ದೇವೆ ಇದನ್ನು ವೈಭವಿಕರಿಸಬಾರದು ಎಂದು ಮನವಿ ಮಾಡಿದರು.
ರೇಣುಕಾ ಸ್ವಾಮಿ ಹತ್ಯೆ ಘಟನೆ ಬಗ್ಗೆ ಕಾನೂನಿನಡಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದೀಗ ರಾಷ್ಟ್ರೀಯ ಅಂತಾರಾಷ್ಟ್ರೀಯ ಸುದ್ದಿಯಾಗಿದೆ. ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ಬಂದಿದೆ ಎಂದರು.
ಇನ್ನು ದರ್ಶನ್ ಸಿನಿಮಾ ಬ್ಯಾನ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ನಿರ್ಧಾರ ನಾವು ಮಾಡೋಕೆ ಆಗೊಲ್ಲ. ಕಲಾವಿದರ ಸಂಘ, ನಿರ್ಮಾಪಕರ ಸಂಘ, ಫ್ಯಾನ್ಸ್ ಪಾಲೋವರ್ಸ್ ಕೂಡ ಇದೆ. ಅಲ್ಲಿ ಸಭೆ ಮಾಡಿದ ನಂತರ ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದರು.