ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಪಿ.ಎಲ್. ಧರ್ಮ ಅವರ ಫೋನ್ ಹ್ಯಾಕ್ ಆಗಿದೆ.
ಈ ಕುರಿತು ವಿಶ್ವವಿದ್ಯಾನಿಲಯದಿಂದ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಲಾಗಿದ್ದು, ಸೈಬರ್ ವಂಚಕರು ಉಪಕುಲಪತಿ ಪ್ರೊ.ಪಿ.ಎಲ್. ಧರ್ಮ ಅವರ ಫೋನ್ ಅನ್ನು ಹ್ಯಾಕ್ ಮಾಡಿದ್ದು, ಹಾಗಾಗಿ ಅದರಿಂದ ಬರುವ ಯಾವುದೇ ಕರೆಗಳಿಗೆ ಪ್ರತಿಕ್ರಿಯಿಸಬೇಡಿ ಮತ್ತು ಯಾವುದೇ ಸಹಾಯವನ್ನು ಮಾಡದಿರಿ ಎಂದು ಪ್ರೊ.ಪಿ.ಎಲ್. ಧರ್ಮ ಅವರು ಮನವಿ ಮಾಡಿದ್ದಾರೆ ಎಂದು ತಿಳಿಸಿದೆ.