ಮೇಷ
ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ ನಿಮ್ಮ ನೆಮ್ಮದಿ ಕೆಡಿಸುವುದು. ನಿರಂತರ ಕಾರ್ಯದಿಂದ ಬಿಡುವು ಪಡೆಯಲು ಕೌಟುಂಬಿಕ ಪರಿಸ್ಥಿತಿ ಒತ್ತಡ ಹೆಚ್ಚಿಸುವುದು.
ವೃಷಭ
ನಿಮ್ಮ ಆಪ್ತರಂತೆ ನಟಿಸುವವರು ಬೆನ್ನಹಿಂದೆ ನಿಮಗೆ ವಿರುದ್ಧವಾಗಿ ವರ್ತಿಸುತ್ತಾರೆ. ಅವರತ್ತ ಒಂದು ಕಣ್ಣಿಡಿ. ದೂರ ಇರಿಸುವುದು ಒಳಿತು.
ಮಿಥುನ
ಇಂದು ಮಾಡಬೇಕಾದ ಕೆಲವು ಕಾರ್ಯಗಳಲ್ಲಿ ಗೊಂದಲ ಕಾಡುವುದು. ಅದನ್ನು ಪರಿಹರಿಸಿ ಮುಂದಿನ ಹೆಜ್ಜೆಯಿಡಿ. ಕುರುಡಾಗಿ ವ್ಯವಹಾರ ನಡೆಸದಿರಿ.
ಕಟಕ
ಮನೆ, ಕುಟುಂಬ ಮತ್ತು ಸಂಬಂಧ ನಿರ್ವಹಣೆ ಮುಂತಾದ ಖಾಸಗಿ ವಿಷಯದಲ್ಲಿ ಹೆಚ್ಚು ವ್ಯಸ್ತರಾಗುವಿರಿ. ಅದನ್ನು ಸಮಾಧಾನದಿಂದ ನಿಭಾಯಿಸಿ.
ಸಿಂಹ
ನಿಮ್ಮ ದೌರ್ಬಲ್ಯ ವನ್ನು ಇತರರು ದುರುಪಯೋಗ ಮಾಡದಂತೆ ಎಚ್ಚರ ವಹಿಸಿರಿ. ಕಠಿಣವಾಗಿ ವರ್ತಿಸಲು ಹಿಂಜರಿಕೆ ತೋರದಿರಿ.
ಕನ್ಯಾ
ನಿಮ್ಮನ್ನು ಕಾಡುವ ಸಮಸ್ಯೆಗೆ ಸದ್ಯಕ್ಕೆ ನಿಮ್ಮಲ್ಲಿ ಪರಿಹಾರವಿಲ್ಲ. ಹಾಗೆಂದು ಹತಾಶೆ ಬೇಡ. ಅದನ್ನು ಮೀರಿ ಬೆಳೆಯುವ ತಾಕತ್ತು ನಿಮ್ಮಲ್ಲಿದೆ.
ತುಲಾ
ನಿಮ್ಮ ಮನದಿಚ್ಛೆ ಇಂದು ಪೂರೈಸುವುದು. ವೃತ್ತಿಯಲ್ಲಿ ಗೌರವ ಹೆಚ್ಚುವುದು. ನಿಮ್ಮ ವಿರುದ್ಧದ ಕೆಲವರ ಚಿತಾವಣೆ ವಿಫಲಗೊಳ್ಳಲಿದೆ.
ವೃಶ್ಚಿಕ
ಮನೆಯಲ್ಲಿ ಕೆಲವು ವಿಷಯ ನಿಮಗೆ ಕಿರಿಕಿರಿ ತಂದೀತು. ಆದರೆ ಅದನ್ನು ನಿಭಾಯಿಸುವ ಹೊಣೆಗಾರಿಕೆ ನಿಮ್ಮದು. ಆದರೆ ಮನಸ್ತಾಪಕ್ಕೆ ಎಡೆಗೊಡದಿರಿ.
ಧನು
ವ್ಯವಹಾರದಲ್ಲಿ ಕೆಲವರು ಒಡ್ಡುವ ಆಮಿಷಕ್ಕೆ ಬಲಿಯಾಗದಿರಿ. ಅದರ ಹಿಂದೆ ಮೋಸವೂ ಇರಬಹುದು. ಪ್ರಾಮಾಣಿಕ ಹಾದಿಯೇ ನಿಮಗೊಳಿತು.
ಮಕರ
ಆಪ್ತರೆನಿಸಿದವರು ಇಂದು ಅಸಹಜ ವರ್ತನೆ ತೋರಬಹುದು. ಅದರ ಹಿನ್ನೆಲೆ ಅರಿತು ವ್ಯವಹರಿಸಿರಿ. ವೃಥಾ ತಪ್ಪುಕಲ್ಪನೆ ಬೆಳೆಸಿಕೊಳ್ಳದಿರಿ.
ಕುಂಭ
ದೈನಂದಿನ ಆಗುಹೋಗು ನಿಮ್ಮನ್ನು ಇಂದು ಹೆಚ್ಚು ಬಾಧಿಸದು. ಅದಕ್ಕಿಂತ ಮಿಗಿಲಾದ ವಿಷಯ ನಿಮ್ಮ ತಲೆಯಲ್ಲಿದೆ. ದೊಡ್ಡ ಸಾಧನೆಯ ಗುರಿ ನಿಮ್ಮ ಮುಂದಿದೆ.
ಮೀನ
ಸಂಬಂಧದಲ್ಲಿ ಸಂಘರ್ಷ ಮೂಡಲು ಅವಕಾಶ ಕೊಡದಿರಿ. ಸಣ್ಣ ಮಾತಿಗೂ ರೇಗದಿರಿ. ಎಲ್ಲವನ್ನು ಸಹನೆಯಿಂದ ಸ್ವೀಕರಿಸಿ. ಖರ್ಚು ಅಧಿಕ.