ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ಗೆ ಸಂಬಂಧಿಸಿದಂತೆ ಆರೋಪಿಗಳು ಶೆಡ್ನಲ್ಲಿ ಏನೇನಾಯ್ತು ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಣ್ಣಾ ನನ್ನ ಕ್ಷಮಿಸಿ.. ಅಕ್ಕ ನನ್ನ ಕ್ಷಮಿಸಿ.. ನನ್ನ ಹೆಂಡತಿ ಗರ್ಭಿಣಿ ನನ್ನ ಬಿಟ್ಬಿಡಿ.. ನನ್ನಿಂದ ತಪ್ಪಾಯ್ತು, ಇನ್ಮುಂದೆ ಹೀಗೆ ಮಾಡಲ್ಲ, ನನ್ನನ್ನು ಬಿಟ್ಟುಬಿಡಿ ಎಲ್ಲೂ ನಿಮ್ಮ ಕಣ್ಣಿಗೆ ಕಾಣಿಸಿಕೊಳ್ಳೋದಿಲ್ಲ ಎಂದು ರೇಣುಕಾಸ್ವಾಮಿ ಪವಿತ್ರಾ ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡಿದ್ದ ಎನ್ನಲಾಗಿದೆ.
ಅದನ್ನ ಆರೋಪಿಗಳು ಆತನ ಮೊಬೈಲ್ನಲ್ಲೆ ರೆಕಾರ್ಡ್ ಕೂಡ ಮಾಡಿದ್ದಾರೆ. ಅದಕ್ಕಾಗಿ ಪೊಲೀಸರು ಮೊಬೈಲ್ ಫೋನ್ಗಾಗಿ ಹುಡುಕಾಟ ನಡೆಸಿದ್ದರು ಎನ್ನಲಾಗಿದೆ.