ಎಷ್ಟೋ ಮಂದಿಗೆ ಬೆಂಡೇಕಾಯಿ ಇಷ್ಟವಿಲ್ಲ. ಏಕೆಂದರೆ ಅದು ಲೋಳೆ, ತಿನ್ನೋದಕ್ಕೆ ವಿಚಿತ್ರ ಎನಿಸುತ್ತದೆ. ಆದರೆ ಬೆಂಡೇಕಾಯಿ ರುಚಿ ತಿಂದವರಿಗೇ ಗೊತ್ತು. ಲೋಳೆ ತೆಗೆಯುವ ವಿಧಾನ ಗೊತ್ತಾದರೆ ಇಷ್ಟಪಟ್ಟು ತಿನ್ನುತ್ತೀರಿ. ಹೇಗೆ ನೋಡಿ..
ಬೆಂಡೇಕಾಯಿಯನ್ನು ತೊಳೆದ ನಂತರ ಮಡಿ ಬಟ್ಟೆಯಲ್ಲಿ ನೀರು ಇರದಂತೆ ಒರೆಸಿ ನಂತರ ಹೆಚ್ಚಬೇಕು
ಇನ್ನು ಬೆಂಡೇಕಾಯಿ ಹುರಿಯುವಷ್ಟು ಸಮಯ ಇಲ್ಲ ಎಂದಾದರೆ ಪಲ್ಯ ಮಾಡುವಾಗ ಮೊಸರು ಹಾಕಿಬಿಡಿ
ಲೋಳೆ ಬಾರದೆಂದರೆ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಹುರಿಯಬೇಕು, ಮೊದಲು ಹೆಚ್ಚು ಲೋಳೆ ಎನಿಸುತ್ತದೆ. ಆದರೆ ಬೆಂಡೇಕಾಯಿ ಒಂದಕ್ಕೊಂದು ಅಂಟಿಕೊಳ್ಳದಷ್ಟು ಹೊತ್ತು ಹುರಿಯಬೇಕು.