ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯ ಎದುರೇ ಜನರು ನನ್ನ ಪರ ಕೂಗಿದ್ದು ಕಾಂಗ್ರೆಸ್, ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಡಿಕೆಶಿ ಎದುರೇ ಜನ ನನ್ನ ಪರವಾಗಿ ಕೂಗೂ ಹಾಕಿದರೆ ಜಿಲ್ಲೆಯ ನಾಯಕರು ಏನ್ ಮಾಡಬೇಕು. ಸಿಎಂ ಎದುರು ಜನ ನನ್ನ ಪರ ಕೂಗಿದ್ದು ಕಾಂಗ್ರೆಸ್, ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ.
ಜನರು ನನ್ನನ್ನು ಬೆಂಬಲಿಸಿದ್ದಾರೆ. ಅದು ನನ್ನ ಮೇಲಿರುವ ಅಭಿಮಾನ. ಜನರ ಪ್ರೀತಿ, ವಿಶ್ವಾಸಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ. ನಮ್ಮನ್ನ, ಪ್ರತಾಪ್ ಸಿಂಹ ಅವರನ್ನು ಬಿಟ್ಟರೆ ಹುಷಾರ್ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.



