April 23, 2026
Thursday, April 23, 2026
spot_img

ಚಿಂತೆಗೆ ಕಾರಣವಾದ ಬ್ಯಾಟಿಂಗ್ ಸ್ಥಿತಿ: ಟೀಮ್ ಇಂಡಿಯಾಗೆ ಟೆನ್ಶನ್ ಕೊಡ್ತಿರೋರು ಇವರೇ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ಫಾರ್ಮೆಟ್‌ನಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಶಕ್ತಿ ಹೆಚ್ಚು ಮೆಚ್ಚುಗೆ ಪಡೆದಿದ್ದರೂ, ಮಿಡಲ್ ಆರ್ಡರ್ ವೈಫಲ್ಯ ತಂಡಕ್ಕೆ ಆತಂಕ ತಂದಿದೆ. ಟೂರ್ನಿಯಲ್ಲಿ ಮೂರು ಬಾರಿ 200ಕ್ಕೂ ಹೆಚ್ಚು ರನ್ ಕಲೆಹಾಕಿದರೂ, ಪ್ರಮುಖ ಪಂದ್ಯಗಳಲ್ಲಿ ಮಿಡಲ್ ಆರ್ಡರ್ ನಿರೀಕ್ಷೆ ಹುಟ್ಟಿಸುವ ಪ್ರದರ್ಶನ ನೀಡಿಲ್ಲ. ಟಾಪ್ ಆರ್ಡರ್ ಯಶಸ್ವಿಯಾದಾಗ ಮಾತ್ರ ತಂಡ ದೊಡ್ಡ ಮೊತ್ತ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿದೆ.

ತಿಲಕ್ ವರ್ಮಾ ಈ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆಡಿದ 8 ಪಂದ್ಯಗಳಲ್ಲಿ ಅವರ ಗರಿಷ್ಠ ಸ್ಕೋರ್ ಕೇವಲ 44 ರನ್ ಆಗಿದೆ. ಅದೇ ರೀತಿ ನಾಯಕ ಸೂರ್ಯಕುಮಾರ್ ಯಾದವ್, ಅಮೆರಿಕಾ ವಿರುದ್ಧ ಅರ್ಧಶತಕ ಹೊರತುಪಡಿಸಿ ಉಳಿದ ಪಂದ್ಯಗಳಲ್ಲಿ ಮೌನವಾಗಿದ್ದಾರೆ. ಇವರಿಬ್ಬರ ಪ್ರದರ್ಶನವೇ ಮಿಡಲ್ ಆರ್ಡರ್ ಸಮಸ್ಯೆಯನ್ನು ಸ್ಪಷ್ಟಪಡಿಸುತ್ತದೆ.

ಇದನ್ನೂ ಓದಿ:

ಹಿಂದೆ ಸ್ಪಿನ್ ಬೌಲಿಂಗ್ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತಿದ್ದ ಬ್ಯಾಟ್ಸ್‌ಮನ್‌ಗಳು ಈಗ ಸವಾಲು ಎದುರಿಸುತ್ತಿದ್ದಾರೆ. ಸ್ಪಿನ್‌ಗೆ ನೆರವಾಗುವ ಪಿಚ್‌ಗಳಲ್ಲಿ ಎದುರಾಳಿ ತಂಡಗಳು ಮೇಲುಗೈ ಸಾಧಿಸುತ್ತಿವೆ.

ಮಹತ್ವದ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ. ಇವರ ವೈಫಲ್ಯ ಲೋವರ್ ಆರ್ಡರ್ ಮೇಲೂ ಪ್ರಭಾವ ಬೀರುತ್ತಿದ್ದು, ತಂಡದ ಕುಸಿತಕ್ಕೆ ಕಾರಣವಾಗುತ್ತಿದೆ. ಪವರ್ ಪ್ಲೇ ಹಾಗೂ ಡೆತ್ ಓವರ್ ಮಾತ್ರವಲ್ಲ, ಮಿಡಲ್ ಓವರ್ ಪ್ರದರ್ಶನವೂ ಪಂದ್ಯ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !