ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನಟ ದರ್ಶನ್ ಮನೆ ಬಳಿ ಇದ್ದ ಮೂರು ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಟ ದರ್ಶನ್ ಆರ್.ಆರ್.ನಗರ ಮನೆ ಬಳಿ ನಿಲ್ಲಿಸಿದ್ದ ಮೂರು ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ಬೈಕ್ ಗಳು ಬಂಧಿತ ಆರೋಪಿಗಳ ಹೆಸರಲ್ಲಿವೆ ಎಂದು ತಿಳಿದುಬಂದಿದೆ.
ಹೊಂದಾ ಶೈನ್, ಆಕ್ಟೀವಾ, ಟಿವಿಎಸ್ ಜುಪಿಟರ್ ಬೈಕ್ ಗಳನ್ನು ವಶಕ್ಕೆ ಪಡೆದಿದ್ದು, ಹೋಂದಾ ಶೈನ್ ಬೈಕ್ ಆರೋಪಿ ನಂದೀಶ್ ಹೆಸರಲ್ಲಿ ಇದೆ, ಹೋಂಡಾ ಆಕ್ಟೀವಾ ಆರೋಪಿ ಮರಿಯಪ್ಪ ಸಿ ಹೆಸರಲ್ಲಿ ಹಾಗೂ ಟಿವಿಎಸ್ ಜುಪಿಟರ್ ಆರೋಪಿ ರಾಮಕೃಷ್ಣ ಹೆಸರಲ್ಲಿದೆ.