ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಕುರಿತು ಕೋಡಿಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಭವಿಷ್ಯ ನುಡಿದಿದ್ದಾರೆ.
ಇಂದು ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಠಿಮಠದ ಶ್ರೀ, ಕೋಪದ ಕೈಗೆ ಬುದ್ಧಿ ಕೊಟ್ಟರೇ ಈ ರೀತಿಯ ಘಟನೆಗಳಿಗೆ ಸಾಕ್ಷಿಯಾಗುತ್ತದೆ ಎಂಬುದಾಗಿ ಮಾರ್ಮಿಕವಾಗಿ ಹೇಳಿದ್ದಾರೆ.
ಇನ್ನೂ ಉಮಾಪತಿ ಕೂಡ ಕೋಠಿಮಠಕ್ಕೆ ಹೋಗಾದ ಕೋಪ ಕಡಿಮೆ ಮಾಡಿಕೊಳ್ಳಬೇಕು. ತಂದೆ, ತಾಯಿ ಮಾತು ಕೇಳಬೇಕು ಅಂತ ಅಂದಿದ್ದರು. ಅದರಂತೆ ನಡೆದುಕೊಂಡ ಕಾರಣ, ಈಗ ಒಳ್ಳೆಯ ಸ್ಥಾನದಲ್ಲಿದ್ದೇನೆ ಅಂತ ಹೇಳಿದ್ದರು ಎಂಬುದಾಗಿ ನೆನಪು ಮಾಡಿಕೊಂಡರು.
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ. ಈ ಹೊತ್ತಿನಲ್ಲೇ ಕೋಠಿ ಮಠದ ಶ್ರೀಗಳು ಕೋಪದ ಕೈಗೆ ಬುದ್ಧಿ ಕೊಟ್ಟರೆ ಈ ರೀತಿಯ ಅವಗಡಗಳು ಸಂಭವಿಸುತ್ತವೆ. ಕರೆಯದೆ ಬರುವವನು ಕೋಪ, ಬರೆಯದೆ ಓದುವವನು ಕಣ್ಣು, ಬರಿಗಾಲಲ್ಲಿ ನಡೆಯುವವನು ಮನಸ್ಸು ಎಂದರು.
ಒಟ್ಟಾರೆಯಾಗಿ ನಟ ದರ್ಶನ್ ಹಾಗೂ ಉಮಾಪತಿ ಗೌಡ ಅವರ ನಡುವಿನ ಗಲಾಟೆಯ ಬಗ್ಗೆ ನಟ ದರ್ಶನ್ ಕೋಪ ಹಾಗೂ ಉಮಾಪತಿ ತಾಳ್ಮೆಯೇ ಕಾರಣ ಎಂಬುದಾಗಿ ಮಾರ್ಮಿಕವಾಗಿ ಕೋಡಿ ಶ್ರೀ ಹೇಳಿದ್ದಾರೆ.
ಅಂದರೇ ನಟ ದರ್ಶನ್ ಕೋಪವೇ ರೇಣುಕಾಸ್ವಾಮಿ ಕೊಲೆಗೂ ಕಾರಣವಾಗಿರೋ ವಿಷಯವನ್ನು ಕೋಡಿಮಠ ಶ್ರೀಗಳು ಈ ರೀತಿ ಬಿಚ್ಚಿಟ್ಟಿದ್ದಾರೆ.