ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಂದು ಎಪಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ಪ್ರಕರಣದ ಬಗ್ಗೆ ತನಿಖೆ ಹಾಗೂ ಮನೆಯಲ್ಲಿ ಸಿಕ್ಕ ಶೂ ಬಗ್ಗೆ ಮಾಹಿತಿ ಕೊಡಲು ಕಾಮಾಕ್ಷಿಪಾಳ್ಯ ಪೊಲೀಸರು ವಿಜಯಲಕ್ಷ್ಮಿಅವರಿಗೆ ನೊಟೀಸ್ ನೀಡಿದ್ದರು. ಇಂದು ಬೆಳಗ್ಗೆ ವಿಜಯಲಕ್ಷ್ಮಿಗೆ ಪೊಲೀಸರು ನೀಡಿ ತನಿಖೆಗೆ ಬರುವಂತೆ ಸೂಚಿಸಿದ್ದರು. ಹೀಗಾಗಿ ಎಪಿ ನಗರ ಪೊಲೀಸ್ ಠಾಣೆಗೆ ತನಿಖೆಗಾಗಿ ವಿಜಯಲಕ್ಷ್ಮಿಹಾಜರಾಗಿದ್ದು, ವಿಚಾರಣೆ ಎದುರಿಸಿದ್ದಾರೆ.
ಮನೆಯಲ್ಲಿ ದರ್ಶನ್ ಶೂ ಸಿಕ್ಕ ಬಗ್ಗೆ ವಿಜಯಲಕ್ಷ್ಮಿ ಹೇಳಿಕೆ ದಾಖಲಿಸಿ ಅನ್ನಪೂರ್ಣೇಶ್ವರಿ ನಗರ ಠಾಣೆಯಿಂದ ಹೊರಟಿದ್ದಾರೆ. ಸುಮಾರು ಐದೂವರೆ ಗಂಟೆಗಳ ಕಾಲ ವಿಜಯಲಕ್ಷ್ಮಿ ಅವರನ್ನು ವಿಚಾರಣೆ ನಡೆಸಿದ ಪೊಲೀಸರು ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.