ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನದಲ್ಲಿ ಹಾಡಹಗಲೇ ಗುಂಡಿನ ಸದ್ದು ಕೇಳಿದ್ದು, ಜನ ಬೆಚ್ಚಿಬಿದ್ದಿದ್ದಾರೆ. ಹೊಯ್ಸಳ ನಗರದಲ್ಲಿ ಘಟನೆ ನಡೆದಿದ್ದು ಗುಂಡು ಹಾರಿಸಿ ಇಬ್ಬರನ್ನು ಕೊಲ್ಲಲಾಗಿದೆ.
ಮಧ್ಯಾಹ್ನ12:30ರ ವೇಳೆಗೆ ಈ ಘಟನೆ ನಡೆದಿದ್ದು, ಮೃತರ ಗುರುತು ಪತ್ತೆಯಾಗಿಲ್ಲ.ಸ್ಥಳಕ್ಕೆ ಎಸ್ಪಿ ಮೊಹಮದ್ ಸುಜೇತಾ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಫ್ಎಸ್ಎಲ್ ತಂಡ ಭೇಟಿ ನೀಡಿದೆ.
ಇನ್ನೊಂದು ವರದಿಯ ಪ್ರಕಾರ ಯುವಕನೊಬ್ಬ ಗುಂಡಿಕ್ಕಿ ಇನ್ನೊಬ್ಬನನ್ನು ಕೊಲೆ ಮಾಡಿದ್ದು, ಕಡೆಗೆ ಗುಂಡು ಹಾರಿಸಿಕೊಂಡು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ನಿವೇಶನ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆಯುತಿತ್ತು. ಈ ವಿಚಾರದ ಬಗ್ಗೆ ಇಂದು ಮಾತುಕತೆ ನಡೆಸಲು ಬಂದಾಗ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಹತ್ಯೆಯಲ್ಲಿ ಅಂತ್ಯವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.