ಹೊಸದಿಗಂತ ವರದಿ, ಮೈಸೂರು :
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ನಟ ದರ್ಶನ್ ಕೊಲೆ ಮಾಡಿರುವುದು ಸತ್ಯವೇ ಆಗಿದ್ದರೆ ಅವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಜೆಡಿಎಸ್ನ ಕಾರ್ಯಾಧ್ಯಕ್ಷರಾದ ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ಗುರುವಾರ ಮೈಸೂರಿನಲ್ಲಿ ಮಾತನಾಡಿದ ಅವರು, ಇಂತಹ ಘಟನೆಯಿಂದ ನಾವೆಲ್ಲಾ ತಲೆ ತಗ್ಗಿಸುವಂತಾಗಿದೆ. ನಟ ದರ್ಶನ್ ನಮ್ಮ ಮೈಸೂರು ಜಿಲ್ಲೆಯವರು. ಸಾಕಷ್ಟು ಹೆಸರು ಮಾಡಿದ್ದರು. ಹೀಗಾಗಿ ಪ್ರಕರಣದಿಂದ ನೋವಾಗಿದೆ. ಇಂತಹ ಘಟನೆ ನಡೆಯಬಾರದಿತ್ತು ಎಂದರು.
ನಾನು ಡಾ. ರಾಜ್ಕುಮಾರ್, ಯಶ್, ಸುದೀಪ್, ಶಿವಣ್ಣನ ಅಭಿಮಾನಿ. ದರ್ಶನ್ ನಮ್ಮ ಜಿಲ್ಲೆಯವರು ಎಂಬ ಕಾರಣಕ್ಕೆ ವಿಶೇಷ ಅಭಿಮಾನವಿತ್ತು. ನಟ ದರ್ಶನ್ ಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಕೊಲೆ ಮಾಡಿರುವುದು ಸತ್ಯವೇ ಆಗಿದ್ದರೇ ತಕ್ಕ ಶಿಕ್ಷೆಯಾಗಲಿ ಎಂದರು.