Monday, January 12, 2026
Monday, January 12, 2026
spot_img

ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಧನಕರ್ ಅವರು ಕಳೆದ ವಾರ ಎರಡು ಬಾರಿ ಪ್ರಜ್ಞಾಹೀನರಾಗಿದ್ದರು. ಜನವರಿ 10 ರಂದು, ಅವರು ಶೌಚಾಲಯಕ್ಕೆ ಹೋದಾಗ “ಎರಡು ಬಾರಿ ಪ್ರಜ್ಞಾಹೀನರಾಗಿದ್ದರು. ಹೀಗಾಗಿ ಅವರಿಗೆ ವೈದ್ಯರ ಸಲಹೆ ಮೇರೆಗೆ MRI ಸ್ಕ್ಯಾನ್ ಮಾಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು, ವೈದ್ಯರು ಪರೀಕ್ಷೆಗಳಿಗೆ ದಾಖಲಾಗಬೇಕೆಂದು ಒತ್ತಾಯಿಸಿದಾಗ ಅವರು ತಪಾಸಣೆಗಾಗಿ AIIMS ಗೆ ಹೋಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಧನಕರ್ ಅವರು ಉಪಾಧ್ಯಕ್ಷರಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ರಾನ್ ಆಫ್ ಕಚ್, ಉತ್ತರಾಖಂಡ, ಕೇರಳ ಮತ್ತು ರಾಷ್ಟ್ರ ರಾಜಧಾನಿ ಸೇರಿದಂತೆ ಈ ಹಿಂದೆ ಹಲವು ಸಂದರ್ಭಗಳಲ್ಲಿ ತಮ್ಮ ಆರೋಗ್ಯ ಸಮಸ್ಯೆ ಮರೆಮಾಚಿದ್ದರು. ಬಳಿಕ ಆರೋಗ್ಯದ ಕಾರಣಗಳನ್ನು ಉಲ್ಲೇಖಿಸಿ ಜುಲೈ 21 ರಂದು ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Most Read

error: Content is protected !!