ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾಸದಲ್ಲಿದ್ದ ವಿದೇಶಿ ಮಹಿಳೆಗೆ ವಯನಾಡಿನ ತಿರುನೆಲ್ಲಿಯಲ್ಲಿರುವ ರೆಸಾರ್ಟ್ನಲ್ಲಿ ಸಿಬ್ಬಂದಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ದಾಖಲಾಗಿದೆ.
ಪೊಲೀಸರು ನೆದರ್ಲ್ಯಾಂಡ್ನ ಮಹಿಳೆಗೆ ಕಿರುಕುಳ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಯನಾಡ್ಗೆ ಭೇಟಿ ನೀಡಲು ಮುಂದಾಗಿದ್ದ 25ರ ಹರೆಯದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಆಯುರ್ವೇದ ಮಸಾಜ್ ವೇಳೆ ತನ್ನ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಆನ್ಲೈನ್ನಲ್ಲಿ ಬುಕ್ ಮಾಡಿದ ನಂತರ ಮಹಿಳೆ ತಿರುನೆಲ್ಲಿಯ ರೆಸಾರ್ಟ್ಗೆ ತಲುಪಿದ್ದರು. ಅದರ ನಂತರ ಆಯುರ್ವೇದ ಮಸಾಜ್ಗೆ ಹೋದ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆದರೆ ಭಾರತ ಪ್ರವಾಸದ ನಂತರ ನೆದರ್ಲ್ಯಾಂಡ್ಗೆ ಹಿಂದಿರುಗಿದಾಗ ಅವರು ದೂರು ದಾಖಲಿಸಿದ್ದಾರೆ. ಕೇರಳ ಎಡಿಜಿಪಿ ಇಮೇಲ್ ಮೂಲಕ ಜೂನ್ 14 ರಂದು ದೂರು ಸ್ವೀಕರಿಸಿದ್ದಾರೆ.