ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳು ಅಪ್ಪಿ ತಪ್ಪಿ ಕೆಳಗೆ ಬಿದ್ದರೂ ಪೋಷಕರಿಗೆ ನೋವಾಗುತ್ತದೆ. ಮಕ್ಕಳ ಕಣ್ಣಲ್ಲಿ ನೀರು ನೋಡಿದರೆ ತಮ್ಮ ಕಣ್ಣಲ್ಲೂ ನೀರು ಬರುತ್ತದೆ. ಆದರೆ ಇಲ್ಲೊಬ್ಬ ಮಲತಂದೆ ಮೂರು ವರ್ಷದ ಮಗುವಿಗೆ ಚಿತ್ರಹಿಂಸೆ ನೀಡಿದ್ದಾನೆ.
ಗೌರಿಬಿದನೂರಿನ ಟಿಪ್ಪು ನಗರದಲ್ಲಿ ಮೂರು ವರ್ಷದ ಬಾಲಕಿಗೆ ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾನೆ. ಆರೋಪಿ ಅಮ್ಜದ್‌ನನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮಗುವಿನ ತಾತ ಎಸ್‌ಜಿ ಅನ್ವರ್ ನೀಡಿದ ದೂರಿನ ಆಧಾರದ ಮೇಲೆ ಗೌರಿಬಿದನೂರು ಪೊಲೀಸರು ಅಮ್ಜದ್‌ನನ್ನು ಬಂಧಿಸಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್‌ಪಿ ಡಿಎಲ್ ನಾಗೇಶ್ ತಿಳಿಸಿದ್ದಾರೆ.
ಜರೀನಾ ತಾಜ್ ಎಂಬಾಕೆ ಮೂರು ಮದುವೆಯಾಗಿದ್ದು ಮೊದಲ ಪತಿಯಿಂದ ಇಬ್ಬರು ಹೆಣ್ಣು ಮಕ್ಕಳು ಮತ್ತು ಎರಡನೇ ಪತಿಯಿಂದ ಮತ್ತೊಂದು ಹೆಣ್ಣು ಮಗು ಜನಿಸಿದ್ದು ಇಬ್ಬರು ಗಂಡಂದಿರನ್ನು ತೊರೆದಿದ್ದ ಜರೀನಾ, 10 ತಿಂಗಳ ಹಿಂದೆ ಟ್ರಕ್ ಡ್ರೈವರ್ ಆಗಿದ್ದ 40 ವರ್ಷದ ಅಮ್ಜದ್ ಅಲಿಯಾಸ್ ಅಶು ನನ್ನು ಮೂರನೇ ಮದುವೆಯಾಗಿದ್ದಳು. ಈತ ಜರೀನಾ ಮನೆಯಲ್ಲಿದ ವೇಳೆ ಮಗುವಿಗೆ ಸಿಗರೇಟ್‌ನಿಂದ ಸುಟ್ಟು ವಿಕೃತಿ ಮೆರೆದಿದ್ದಾನೆ.