ಮೇಷ
ಇಂದು ಪ್ರಯಾಣದ ಸಾಧ್ಯತೆ ಇದೆ. ದಿಟ್ಟ ನಿರ್ಧಾರ ನಿಮ್ಮ ವ್ಯವಹಾರ ಸುಗಮಗೊಳಿಸಲಿದೆ. ಕೌಟುಂಬಿಕ ಸಹಕಾರ, ಸಮಾಧಾನ.
ವೃಷಭ
ಅನಿರೀಕ್ಷಿತ ವಿದ್ಯಮಾನ ಸಂಭವಿಸಬಹುದು. ಗಾಬರಿ ಬೇಡ. ಅದನ್ನು ಸಮಾಧಾನದಿಂದ ನಿಭಾಯಿಸಿ. ಸಂಗಾತಿ ಜತೆಗಿನ ಭಿನ್ನಮತ ನಿವಾರಣೆ.
ಮಿಥುನ
ಹಳೆಯ ತಪ್ಪು ಪುನರಾವರ್ತನೆ ಮಾಡದಿರಿ. ವ್ಯವಹಾರ ದಲ್ಲಿ ತುಸು ಬದಲಾವಣೆ ಮಾಡಿಕೊಳ್ಳಿ. ಅದರಿಂದ ಯಶ ಕಾಣುವಿರಿ. ಕೌಟುಂಬಿಕ ನೆಮ್ಮದಿ.
ಕಟಕ
ಒತ್ತಡ ಕಡಿಮೆ ಮಾಡಿಕೊಳ್ಳಿ. ಅದು ನಿಮ್ಮ ದೇಹಾರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮನಸು ನಿರಾಳಗೊಳಿಸುವ ಹವ್ಯಾಸ ಒಳಿತು.
ಸಿಂಹ
ಸರಿಯಾಗಿ ಪರಾಮರ್ಶೆ ನಡೆಸಿ ಭವಿಷ್ಯದ ಯೋಜನೆ ರೂಪಿಸಿ. ಎಲ್ಲರ ಸಹಕಾರ ಪಡಕೊಳ್ಳಿ. ನೆರೆಕರೆ ಜತೆ ವಾಗ್ವಾದ ಸಂಭವ. ಸಹನೆ ಕಾಯ್ದುಕೊಳ್ಳಿ.
ಕನ್ಯಾ
ಇತರರ ಜತೆ ವ್ಯವಹರಿಸುವಾಗ ಅವರ ಭಾವನೆಗೂ ಸ್ಪಂದಿಸಿ. ತಪ್ಪಭಿಪ್ರಾಯ ನಿವಾರಿಸಲು ಪ್ರಯತ್ನಿಸಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
ತುಲಾ
ಮನೆಯವರ ಜತೆ ಸಂಯಮದಿಂದ ವರ್ತಿಸಿ. ಅವರ ಭಾವನೆ ಗೌರವಿಸಿ. ಸಣ್ಣ ವಿವಾದವನ್ನು ತಾರಕಕ್ಕೆ ಏರಿಸಬೇಡಿ. ಆರ್ಥಿಕ ಬಿಕ್ಕಟ್ಟು ಸಂಭವ.
ವೃಶ್ಚಿಕ
ಹಳೆಯ ತಪ್ಪುಗಳನ್ನು ಸರಿಪಡಿಸಲು ಯತ್ನಿಸಿ. ಹಳೆ ತಪ್ಪು ಈಗಲೂ ನಿಮ್ಮನ್ನು ಕಾಡಬಹುದು. ಸ್ನೇಹಿತರ ಜತೆಗಿನ ಸಂಬಂಧ ಹಾಳಾಗದಂತೆ ನೋಡಿಕೊಳ್ಳಿ.
ಧನು
ವೃತ್ತಿಯಲ್ಲೂ , ಖಾಸಗಿ ಬದುಕಲ್ಲೂ ಯಶಸ್ವಿ ದಿನ. ಗೌರವ ವೃದ್ಧಿ. ನಿಮ್ಮ ಮಾತಿಗೆ ಮನ್ನಣೆ ದೊರಕುವುದು. ಸಂಬಂಧ ವೃದ್ಧಿ. ಸಮಸ್ಯೆ ಪರಿಹಾರ.
ಮಕರ
ಆಶಾವಾದ ಮತ್ತು ನಗು ನಿಮ್ಮ ಮನಸ್ಸು ಮತ್ತು ಆರೋಗ್ಯವನ್ನು ಚೆನ್ನಾಗಿಡುವುದು. ದೈನಂದಿನ ಬದುಕಲ್ಲಿ ಬದಲಾವಣೆಗೆ ಹಾತೊರೆಯುವಿರಿ.
ಕುಂಭ
ಪ್ರಮುಖ ನಿರ್ಧಾರ ತಾಳುವಾಗ ಇತರರ ಸಲಹೆ ಪಡೆಯಿರಿ. ಆ ಮೂಲಕ ಋಣಾತ್ಮಕ ಫಲಿತಾಂಶ ತಡೆಯಬಹುದು. ಕೌಟುಂಬಿಕ ಅಶಾಂತಿ.
ಮೀನ
ಆರೋಗ್ಯ ಸುಸ್ಥಿರ. ಮಾನಸಿಕ ಶಾಂತಿ. ಕೌಟುಂಬಿಕ ಪರಿಸರ ನೆಮ್ಮದಿದಾಯಕ. ನಿಮ್ಮ ಸಾಧನೆಗಳು ನಿಮಗೇ ತೃಪ್ತಿ ನೀಡುವವು. ಧನ ಅಭಿವೃದ್ಧಿ.