ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣನ್ನು ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಹಾಸನದ ಸೆನ್ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸಂತ್ರಸ್ತ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 377 (ಅಸ್ವಾಭಾವಿಕ ಅಪರಾಧಗಳು), 342 (ಕಾನೂನುಬಾಹಿರ ಬಂಧನಕ್ಕೆ ಶಿಕ್ಷೆ) ಮತ್ತು 506 (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಡಿಜಿಪಿ ಕಚೇರಿಗೆ ದೂರು ನೀಡಿರುವ ಸಂತ್ರಸ್ತ ದೂರಿನ ಪ್ರತಿಯನ್ನು ಎಸ್ಪಿಗೆ ಇಮೇಲ್ ಮಾಡಿದ್ದಾರೆ. ಇಮೇಲ್ ಆಧರಿಸಿ ಪೊಲೀಸರು ಸಂತ್ರಸ್ತನನ್ನ ಸಂಪರ್ಕಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.