ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಮಗ ಸೂರಜ್ ರೇವಣ್ಣ ಪರ ಎಚ್.ಡಿ. ರೇವಣ್ಣ ಬ್ಯಾಟಿಂಗ್ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸುತ್ತಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸದೆ ಬೆಂಗಳೂರಿಗೆ ಏಕೆ ಕರೆತರಲಾಯಿತು? ನಮ್ಮನ್ನು ಹೆದರಿಸಲು ಹೀಗೆ ಮಾಡುತ್ತಿದ್ದಾರೆ ಎಂದರು.
ಸೂರಜ್ ರೇವಣ್ಣ ಮೊದಲು ದೂರು ನೀಡಿದ್ದರು. ದೂರಿನ ನಂತರ ಅವರು ಏನು ಮಾಡಿದರು? ತಪ್ಪು ಸೂರಜ್ ಮಾಡಿದ್ರೆ ದೂರು ಕೊಟ್ಟಿದ್ದು ಯಾಕೆ? ಈಗ ಏನೂ ಹೇಳಲ್ಲ. ಸಮಯ ಬಂದಾಗ ಹೇಳುತ್ತೇನೆ. ನಮ್ಮ ಕುಟುಂಬವನ್ನು ಯಾರೋ ಟಾರ್ಗೆಟ್ ಮಾಡ್ತಿದ್ದಾರೆ? ಎಲ್ಲವನ್ನೂ ದೇವರಿಗೆ ಬಿಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.