ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ-ಜಹೀರ್‌ ಇಕ್ಬಾಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ತಮ್ಮ ದೀರ್ಘಕಾಲದ ಗೆಳೆಯ ಜಹೀರ್‌ ಇಕ್ಬಾಲ್‌ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಎರಡೂ ಕುಟುಂಬಗಳ ಆಪ್ತರು, ಗೆಳೆಯರ ಸಮ್ಮುಖದಲ್ಲಿ ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್‌ ಇಕ್ಬಾಲ್‌ ಅವರು ಮದುವೆಯಾದರು.

ಸೋನಾಕ್ಷಿ ಸಿನ್ಹಾ ಅವರು ಫೋಟೊಗಳನ್ನು ಹಂಚಿಕೊಂಡಿರುವ ಜತೆಗೆ ಭಾವನಾತ್ಮಕವಾಗಿ ಪೋಸ್ಟ್‌ ಮಾಡಿದ್ದಾರೆ. ‘ಏಳು ವರ್ಷದ ಹಿಂದಿನ ಇದೇ ದಿನ ಅಂದರೆ, 2017ರ ಜೂನ್‌ 23ರಂದು ನಮ್ಮಿಬ್ಬರ ಕಣ್ಣುಗಳು ಮೊದಲ ಬಾರಿ ಸಂಧಿಸಿದವು. ಆ ಕಣ್ಣುಗಳ ನೋಟದಲ್ಲಿಯೇ ನಾವು ನಿಜವಾದ ಪ್ರೇಮವನ್ನು ಕಂಡೆವು ಹಾಗೂ ಆ ಪ್ರೀತಿ ತುಂಬಿದ ನೋಟವನ್ನು ಜೀವನಪೂರ್ತಿ ಸವಿಯಲು ನಿರ್ಧರಿಸಿದೆವು. ಸವಾಲುಗಳನ್ನು ಎದುರಿಸಿ, ದೇವರು ಹಾಗೂ ಕುಟುಂಬಸ್ಥರ ಆಶೀರ್ವಾದದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ. ಮುಂದಿನ ದಿನಗಳಲ್ಲೂ ಪ್ರೀತಿಯು ನಮ್ಮ ಜೀವನವನ್ನು ಇನ್ನಷ್ಟು ಸುಂದರಗೊಳಿಸುತ್ತದೆ ಎಂಬ ನಂಬಿಕೆ ಇದೆ’ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.

ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್‌ ಇಕ್ಬಾಲ್‌ ಅವರು ಹಿಂದು ಅಥವಾ ಇಸ್ಲಾಂ ಸಂಪ್ರದಾಯದಂತೆ ಮದುವೆಯಾಗದೆ, ಜಹೀರ್‌ ಅವರ ತಂದೆ ಇಕ್ಬಾಲ್‌ ರತಾನ್ಸಿ ಅವರು ಇದಕ್ಕೂ ಮೊದಲು ಹೇಳಿದಂತೆ ‘ನಾಗರಿಕʼ ಸಂಪ್ರದಾಯದಂತೆ ಅಂದರೆ, ಸಾಮಾನ್ಯವಾಗಿ ಮದುವೆಯಾಗಿದ್ದಾರೆ. ಇಬ್ಬರೂ ತಮ್ಮ ವಿವಾಹವನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನು, ಆರಂಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾ ಅವರು ಮುನಿಸು ಮರೆತು, ನವದಂಪತಿಗೆ ಆಶೀರ್ವಾದ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!