ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ಜೈಲು ಸೇರಿದ್ದು, ದರ್ಶನ್ ಭೇಟಿ ಮಾಡಲು ನಟ ವಿನೋದ್ ಪ್ರಭಾಕರ್ ಜೈಲಿಗೆ ಆಗಮಿಸಿದ್ದಾರೆ.
ಪರಪ್ಪನ ಅಗ್ರಹಾರದ ಬಳಿ ಬಂದಿದ್ದು ಅದಕ್ಕೂ ಮುನ್ನ ಮಾಧ್ಯಮದ ಜತೆ ಮಾತನಾಡಿದ್ದಾರೆ. ಭೇಟಿಗೆ ಅವಕಾಶ ಕೇಳಿದ್ದೆ, ಒಳಗೆ ಬಿಟ್ರೆ ಭೇಟಿ ಆಗುತ್ತೇನೆ. ಕುಟುಂಬದವರಿಗೆ ಮಾತ್ರ ಅವಕಾಶ ಅಂತ ಹೇಳಿದ್ದಾರೆ. ನೊಡೋಣ ಒಳಗಡೆ ಹೋಗಿ ಅಧಿಕಾರಿಗಳಿಗೆ ಕೇಳಿ ಭೇಟಿ ಆಗ್ತೇನೆ ಎಂದು ಹೇಳಿದ್ದಾರೆ.