ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್‍ಗೆ ಜೈಲಿನಲ್ಲಿ ನೀಡಿರುವ 6106 ನಂಬರ್ ಇನ್ಮುಂದೆ ನಮಗೆ ಇದೇ ಲಕ್ಕಿ ನಂಬರ್ ಎಂದು ಅಭಿಮಾನಿಯೊಬ್ಬ ಗಾಡಿ ಮೇಲೆ ಹಾಕಿಸಿಕೊಳ್ಳಲು ಮುಂದಾಗಿದ್ದಾನೆ.
ಬನ್ನೂರಿನ ದರ್ಶನ್ ಅಭಿಮಾನಿ ಧನುಷ್, ದರ್ಶನ್‍ಗೆ ನೀಡಿರುವ ನಂಬರ್ ಅನ್ನು ಆರ್ ಟಿಓ ನಲ್ಲಿ ರಿಜಿಸ್ಟರ್ ಮಾಡಿಸಲು ಮುಂದಾಗಿದ್ದಾನೆ. ಈ ವೇಳೆ ನಟನ ಜೈಲುವಾಸ ನೆನೆದು ಕಣೀರಿಟ್ಟು, ಶೀಘ್ರ ಬಿಡುಗಡೆಯಾದರೆ 101 ತೆಂಗಿನಕಾಯಿ ಒಡೆಯುವುದಾಗಿ ನಾಡ ಅಧಿದೇವತೆ ಚಾಮುಂಡಿಯಲ್ಲಿ ಹರಕೆ ಹೊತ್ತಿದ್ದಾನೆ.
ನಮ್ಮ ಬಾಸ್ ಏನೂ ತಪ್ಪೇ ಮಾಡಿಲ್ಲ, ನಮ್ಮ ಬಾಸ್‍ನ್ನ ನಾವು ಎಂದೂ ಬಿಟ್ಟುಕೊಡುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿಲ್ಲ ಎಂದರೆ ದರ್ಶನ್ ರಾಜಾರೋಷವಾಗಿ ಹೊರಬರಲಿದ್ದಾರೆ ಎಂದು ಆತ ಹೇಳಿಕೊಂಡಿದ್ದಾನೆ.