ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಶ್ರೀಲೀಲಾ ಕನ್ನಡದಿಂದ ತಮ್ಮ ಸಿನಿ ಜರ್ನಿಯನ್ನು ಆರಂಭಿಸಿದ್ದು, ಕನ್ನಡ ಸಿನಿಮಾಗಳ ನಂತರ ತೆಲುಗು ಇಂಡಸ್ಟ್ರಿ ಕಡೆ ಮುಖ ಮಾಡಿದ್ದರು. ಅಲ್ಲಿ ದೊಡ್ಡ ದೊಡ್ಡ ನಟರ ಜತೆ ಶ್ರೀಲೀಲಾ ಆಕ್ಟಿಂಗ್ ಮಾಡಿದ್ದು, ಈಗಲೋ ಆಗಲೋ ಬಾಲಿವುಡ್‌ಗೆ ಹಾರುತ್ತಾರೆ ಎನ್ನುವ ಮಾತು ಕೇಳಿಬರುತ್ತಿತ್ತು.
ಇದೀಗ ಆ ಘಳಿಗೇ ಬಂದೇ ಬಿಟ್ಟಿದ್ದು, ಅಂತೂ ನಟಿ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಕನ್ನಡತಿ ಶ್ರೀಲೀಲಾಗೆ ನಟ ವರುಣ್ ಧವನ್ ಸಾಥ್ ನೀಡಲಿದ್ದಾರೆ. ಹೆಸರು ರಿವೀಲ್ ಆಗದ ಈ ಸಿನಿಮಾದಲ್ಲಿ ನಟಿ ಮೃಣಾಲ್ ಠಾಕೂರ್ ಕೂಡ ನಟಿಸುತ್ತಿದ್ದು, ಶ್ರೀಲೀಲಾ ಕ್ಯಾರೆಕ್ಟರ್ ಹೇಗಿದೆ ಎಂದುಜನ ಕುತೂಹಲ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್‌ಗೆ ಹೋದರೂ ಪರವಾಗಿಲ್ಲ ಕನ್ನಡದ ಬೇರು ಮರೆಯಬೇಡಿ, ಇಲ್ಲಿ ಸಿನಿಮಾ ಸಿಕ್ಕರೆ ಅಭಿನಯಿಸಿ ಅಂತಿದ್ದಾರೆ ಫ್ಯಾನ್ಸ್