ಅಯೋಧ್ಯೆ ರಾಮಮಂದಿರದ ಚಾವಣಿ ಸೋರುತ್ತಿಲ್ಲ: ನಿರ್ಮಾಣ ಸಮಿತಿ ನೀಡಿತು ಸ್ಪಷ್ಟನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅಯೋಧ್ಯೆ ರಾಮಮಂದಿರದ ಗರ್ಭಗುಡಿಗೆ ಮಳೆನೀರು ಸೋರಿಕೆಯಾಗುತ್ತಿದೆ ಎಂಬ ವಂದತಿಗಳನ್ನು ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಂಗಳವಾರ ನಿರಾಕರಿಸಿದ್ದಾರೆ. ನೀರಿನ ಸೋರಿಕೆಯಾಗುತ್ತಿಲ್ಲ. ಆದರೆ ವಿದ್ಯುತ್ ತಂತಿಗಳನ್ನು ಅಳವಡಿಸಲು ಅಳವಡಿಸಲಾದ ಪೈಪ್ ಗಳಿಂದ ಮಳೆನೀರು ಒಳಗೆ ಬಂದಿದೆ ಎಂದು ಹೇಳಿದ್ದಾರೆ.

ನಾನು ಸ್ವತಃ ದೇವಾಲಯದ ಕಟ್ಟಡವನ್ನು ಪರಿಶೀಲಿಸಿದ್ದೇನೆ. ಎರಡನೇ ಮಹಡಿ ನಿರ್ಮಾಣ ಹಂತದಲ್ಲಿದೆ. ಅಂತಿಮವಾಗಿ ಎರಡನೇ ಮಹಡಿಯ ಚಾವಣಿ ನಿರ್ಮಾಣಗೊಂಡ ಬಳಿಕ ಮಳೆನೀರು ದೇವಾಲಯಕ್ಕೆ ಪ್ರವೇಶಿಸುವುದನ್ನು ನಿಲ್ಲುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಭಾರೀ ಮಳೆಯಲ್ಲಿ ದೇವಾಲಯದ ಗರ್ಭಗುಡಿಯ ಚಾವಣಿಯಿಂದ ಭಾರಿ ಸೋರಿಕೆಯಾಗಿದೆ ಎಂದು ದೇವಾಲಯದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಹೇಳಿದ್ದಾರೆ. ರಾಮ್ ಲಲಾ ವಿಗ್ರಹದ ಮುಂದೆ ಅರ್ಚಕರು ಕುಳಿತುಕೊಳ್ಳುವ ಸ್ಥಳ ಮತ್ತು ವಿಐಪಿ ದರ್ಶನಕ್ಕಾಗಿ ಜನರು ಬರುವ ಸ್ಥಳದ ಚಾವಣಿಯಿಂದ ಮಳೆನೀರು ನೇರವಾಗಿ ಸೋರಿಕೆಯಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಇದೀಗ ಚಾವಣಿಯ ಮೇಲೆ ತಾತ್ಕಾಲಿಕ ಸೂರು ನಿರ್ಮಾಣ ಮಾಡುವ ಮೂಲಕ ಭಕ್ತರಿಗೆ ಮಳೆ ನೀರು ಮತ್ತು ಸೂರ್ಯನ ಬಿಸಿಲಿನಿಂದ ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ. ದೇವಾಲಯದ ನಿರ್ಮಾಣದ ಪ್ರಗತಿಯ ಬಗ್ಗೆ ಮಾತನಾಡಿದ ಮಿಶ್ರಾ, ಮೊದಲ ಮಹಡಿಯಲ್ಲಿ ಕೆಲಸ ನಡೆಯುತ್ತಿದೆ. ಈ ವರ್ಷದ ಜುಲೈ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ. ಡಿಸೆಂಬರ್ ವೇಳೆಗೆ ದೇವಾಲಯದ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!