ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ರೊಮ್ಯಾಂಟಿಕ್ ಪಾತ್ರಗಳಲ್ಲಿ ಮಾತ್ರ ನಟಿಸ್ತಿದ್ದಾರೆ. ಆದರೆ ಈ ಬಾರಿ ತಮ್ಮ ಆಕ್ಟಿಂಗ್ ಸ್ಕಿಲ್ಸ್‌ನ್ನು ಚಾಲೆಂಜ್ ಮಾಡಿಕೊಳ್ಳಲು ರಶ್ಮಿಕಾ ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಹಾರರ್ ಹಾಗೂ ಕಾಮಿಡಿ ಸಿನಿಮಾ ಇದಾಗಿದ್ದು, ರಶ್ಮಿಕಾಗೆ ಆಯುಷ್ಮಾನ್ ಖುರಾನಾ ಸಾಥ್ ನೀಡಲಿದ್ದಾರೆ. ಇದೇ ಮೊದಲ ಬಾರಿಗೆ ರಶ್ಮಿಕಾ ಆಯುಷ್ಮಾನ್ ಜೊತೆ ಆಕ್ಟಿಂಗ್ ಮಾಡುತ್ತಿದ್ದು, ಇನ್ನೇನು ಕೆಲವೇ ತಿಂಗಳಿನಲ್ಲಿ ಸಿನಿಮಾ ಸೆಟ್ಟೇರಲಿದೆ.