ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಜೂನ್ 26) ಸಂಸತ್ತಿನಲ್ಲಿ ಇಬ್ಬರು ಬಾಲಕಿಯರೊಂದಿಗೆ ಕಾಲ ಕಳೆದಿದ್ದಾರೆ. ಸಂಸತ್ ಅಧಿವೇಶನ, ಪ್ರತಿಪಕ್ಷಗಳ ಗಲಾಟೆ, ನೂತನ ಸ್ಪೀಕರ್ ಆಯ್ಕೆಯ ಭರಾಟೆಯ ಮಧ್ಯೆಯೂ ಮೋದಿ ಅವರು ಇಬ್ಬರು ಪುಟಾಣಿಗಳೊಂದಿಗೆ ಕಾಲ ಕಳೆದಿದ್ದಾರೆ.
ಸಂಸತ್ನಲ್ಲಿರುವ ತಮ್ಮ ಕಚೇರಿಗೆ ಆಗಮಿಸಿದ ಇಬ್ಬರು ಪುಟಾಣಿಗಳೊಂದಿಗೆ ಮೋದಿ ನಲಿದಾಡಿದ್ದಾರೆ. ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರ ಇಬ್ಬರು ಮೊಮ್ಮಕ್ಕಳು ಸಂಸತ್ಗೆ ಆಗಮಿಸಿದ್ದಾರೆ. ಅವರು ನರೇಂದ್ರ ಮೋದಿ ಅವರ ಕಚೇರಿಗೆ ತೆರಳಿದ್ದು, ಇಬ್ಬರೂ ಆಗಮಿಸುತ್ತಲೇ ಮೋದಿ ಅವರು ನಗುತ್ತಲೇ ಅವರನ್ನು ಸ್ವಾಗತಿಸಿದ್ದಾರೆ. ಇನ್ನು, ಪುಟಾಣಿಗಳೂ ಅಷ್ಟೇ, ಮೋದಿ ಅವರ ಎದುರು ದೇಶಭಕ್ತಿ ಗೀತೆಯನ್ನು ಒಟ್ಟಿಗೆ ಹಾಡುವ ಮೂಲಕ ಗಮನ ಸೆಳೆದಿದ್ದಾರೆ. ಇಬ್ಬರೂ ಒಂದೇ ಬಣ್ಣದ ದಿರಸು ಧರಿಸಿದ್ದು ವಿಶೇಷವಾಗಿತ್ತು. ಇಬ್ಬರು ಪುಟಾಣಿಗಳೊಂದಿಗೆ ಮೋದಿ ಸಮಯ ಕಳೆದ ವಿಡಿಯೊ ಈಗ ಭಾರಿ ವೈರಲ್ ಆಗಿದೆ.