Monday, January 12, 2026
Monday, January 12, 2026
spot_img

ಭಾರತ-ಜರ್ಮನಿ ಸಂಬಂಧಕ್ಕೆ ಪ್ಲಾಟಿನಂ ಜೂಬಿಲಿ ಸಂಭ್ರಮ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್​ನ ಅಹ್ಮದಾಬಾದ್​ನಲ್ಲಿ ನಡೆದ ಭಾರತ ಜರ್ಮನಿ ಸಿಇಒ ಫೋರಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್ ಚಾನ್ಸಲರ್ ಫ್ರೆಡರಿಚ್ ಮೆರ್ಜ್ ಪಾಲ್ಗೊಂಡರು.

ಭಾರತ ಮತ್ತು ಜರ್ಮನಿ ನಡುವಿವ ದ್ವಿಪಕ್ಷೀಯ ಸಂಬಂಧವನ್ನು ವಿಸ್ತರಿಸುವ ಸಾಧ್ಯತೆಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಗಿರುವುದು ತಿಳಿದುಬಂದಿದೆ.

ಭಾರತ ಮತ್ತು ಜರ್ಮನಿ ದೇಶಗಳ ಸಂಬಂಧಕ್ಕೆ ಪ್ಲಾಟಿನಂ ಜೂಬಿಲಿ (70 ವರ್ಷ) ಸಂಭ್ರಮ ಇದೆ. ಎರಡೂ ದೇಶಗಳ ನಡುವಿನ ಕಾರ್ಯತಂತ್ರಾತ್ಮಕ ಸಹಭಾಗಿತ್ವಕ್ಕೆ ಸಿಲ್ವರ್ ಜೂಬಿಲಿ (25 ವರ್ಷ) ಸಂಭ್ರಮ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ನಮ್ಮ ಸಂಬಂಧಕ್ಕೆ ಪ್ಲಾಟಿಯಂನ ಸ್ಥಾಯತ್ವ ಮತ್ತು ಬೆಳ್ಳಿಯ ಹೊಳಪು ಇದೆ ಎಂದಾಯಿತು. ಭಾರತ ಹಾಗೂ ಜರ್ಮನಿ ನಡುವಿನ ಸಹಭಾಗಿತ್ವ ಸುಲಲಿತವಾದುದು. ಪರಸ್ಪರ ನಂಬಿಕೆ ಮತ್ತು ಮೌಲ್ಯಗಳ ತಳಹದಿಯಲ್ಲಿ ನಿರ್ಮಾಣವಾದಂತಹ ಹೊಂದಾಣಿಕೆ ಅದು. ಪ್ರತಿಯೊಂದು ಸೆಕ್ಟರ್​ನಲ್ಲೂ ಪರಸ್ಪರ ಅನುಕೂಲವಾಗುವ ಅವಕಾಶಗಳಿವೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ಸಂಶೋಧನೆಗಳಲ್ಲಿ ಜೊತೆಗಾರಿಕೆ ಇದೆ. ಇದರಿಂದ ಹೊಸ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಎಡೆ ಆಗುತ್ತಿದೆ’ ಎಂದು ಇಂಡಿಯಾ ಜರ್ಮನಿ ಸಿಇಒ ಫೋರಂ ಸಭೆಯಲ್ಲಿ ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಮತ್ತು ಐರೋಪ್ಯ ಒಕ್ಕೂಟ ನಡುವೆ ವ್ಯಾಪಾರ ಒಪ್ಪಂದ ಶೀಘ್ರದಲ್ಲೇ ಅಂತಿಮಗೊಳ್ಳುತ್ತೆ. ನಮ್ಮ ವ್ಯಾಪಾರ, ಹೂಡಿಕೆ ಮತ್ತು ಪಾರ್ಟ್ನರ್​ಶಿಪ್​ಗೆ ಹೊಸ ಅಧ್ಯಾಯ ಆರಂಭವಾಗುತ್ತದೆ. ಇಲ್ಲಿಂದ ನಿಮಗೆ ದಾರಿ ಸ್ಪಷ್ಟವಾಗಿರುತ್ತದೆ. ಜರ್ಮನ್​ನ ಪ್ರಿಸಿಶನ್ ಮತ್ತು ಇನ್ನೋವೇಶನ್​ಗಳೊಂದಿಗೆ ಭಾರತದ ವೇಗ ಮತ್ತು ವ್ಯಾಪಕತೆಯು ಸೇರಬೇಕು. ನೀವು ಭಾರತದಲ್ಲಿ ಉತ್ಪಾದನೆ ಮಾಡಬೇಕು. ಆಂತರಿಕ ಬೇಡಿಕೆಯ ಅನುಕೂಲ ನಿಮಗೆ ಇರುತ್ತದೆ. ತಡೆಯಿಲ್ಲದ ರಫ್ತು ಕೂಡ ಸಾಧ್ಯವಾಗುತ್ತದೆ’ ಎಂದು ಜರ್ಮನ್ ಸಿಇಒಗಳಿಗೆ ಮೋದಿ ಭರವಸೆ ಕೊಟ್ಟಿದ್ದಾರೆ.

Most Read

error: Content is protected !!