ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ನೋಡಲು ಹಲವಾರು ಅಭಿಮಾನಿಗಳು ತೆರಳುತ್ತಿದ್ದಾರೆ. ಆದರೆ ಯಾರಿಗೂ ಕೂಡ ದರ್ಶನ್ ಭೇಟಿಗೆ ಅವಕಾಶ ನೀಡಿಲ್ಲ.
ಹೀಗಿದ್ದರೂ ದರ್ಶನ್ ಭೇಟಿಗೆ ಯುವತಿವೊಬ್ಬಳು ಆಗಮಿಸಿದ್ದಳು. ನಾನು ದರ್ಶನ್ ನೆಂಟರು, ಅವರನ್ನು ನೋಡಬೇಕು ಬಿಡಿ ಎಂದು ಜೈಲಿನ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾಳೆ. ಆದರೆ ಅಧಿಕಾರಿಗಳು ಮಾತ್ರ ದರ್ಶನ್ ಭೇಟಿಗೆ ಅವಕಾಶ ನೀಡಿಲ್ಲ. ನೀಲಿ ಬಣ್ಣದ ಹುಂಡೈ ಕಾರಿನಲ್ಲಿ ಬಂದ ಯುವತಿ ಕ್ಯಾಮೆರಾ ಕಂಡೊಡನೆ ಅಲ್ಲಿಂದ ವಾಪಸ್ ಮರಳಿದ್ದಾರೆ.
ದರ್ಶನ್ ಸರ್ ನಮ್ಮ ಕುಟುಂಬದವರು. ಅವರನ್ನು ನೋಡಲು ಬಂದಿದ್ದೆ. ಜೈಲು ಅಧಿಕಾರಿಗಳು ಅವಕಾಶ ನೀಡುವುದಿಲ್ಲʼ ಎಂದರು ಯುವತಿ. ಹೆಸರನ್ನು ಎಲ್ಲಿಯೂ ಹೇಳಿಕೊಂಡಿಲ್ಲ.