ಡಿಆರ್​ಡಿಒ ಮತ್ತೊಂದು ಸಾಧನೆ: ವೈಮಾನಿಕ ಗುರಿ ಧ್ವಂಸ ಸಾಮರ್ಥ್ಯದ ‘ಅಭ್ಯಾಸ್​’ ಪರೀಕ್ಷಾರ್ಥ ಹಾರಾಟ ಯಶಸ್ವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಕ್ಷಿಪಣಿಗೆ ಹೆಚ್ಚಿನ ಬಲ ತುಂಬುವ ವೈಮಾನಿಕ ಗುರಿ ಧ್ವಂಸ ಸಾಮರ್ಥ್ಯದ ‘ಅಭ್ಯಾಸ್’ನ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ ಎಂದು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಹೇಳಿದೆ.

ಒಡಿಶಾದ ಚಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಲ್ಲಿ ‘ಅಭ್ಯಾಸ್’ನ ಒಟ್ಟು 10 ಅಭಿವೃದ್ಧಿ ಪ್ರಯೋಗಗಳನ್ನು ನಡೆಸಲಾಯಿತು. ವಿಮಾನದಲ್ಲಿ ಕಣ್ಗಾವಲು ಟೆಲಿಮೆಟ್ರಿ, ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಸೇರಿದಂತೆ ವಿವಿಧ ಟ್ರ್ಯಾಕಿಂಗ್ ಸೆನ್ಸರ್‌ಗಳನ್ನು ಪರೀಕ್ಷಿಸಲಾಯಿತು.

ಆರು ಗುರಿಗಳನ್ನು ಪರೀಕ್ಷೆ ಮಾಡಲಾಗಿದೆ. ಎಲ್ಲ ಪರೀಕ್ಷೆಗಳು ಕೂಡ ಯಶಸ್ವಿಯಾಗಿವೆ. ಅದರಲ್ಲೂ, ಕೇವಲ 30 ನಿಮಿಷದಲ್ಲಿ ಸತತ ಎರಡು ಗುರಿಗಳನ್ನು ಪರೀಕ್ಷೆ ಮಾಡಲಾಗಿದ್ದು ಪ್ರಯೋಗದ ಸಮಯದಲ್ಲಿ ಬೂಸ್ಟರ್‌ನ ಸುರಕ್ಷಿತ ಬಿಡುಗಡೆ, ಲಾಂಚರ್‌ ಕ್ಲಿಯರೆನ್ಸ್‌ ಹಾಗೂ ಒತ್ತಡವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಇದೆ ಎಂಬುದನ್ನು ವಿಜ್ಞಾನಿಗಳು ಪರೀಕ್ಷೆ ವೇಳೆ ದೃಢಪಡಿಸಿಕೊಂಡರು ದೆ.

ಆಟೋ ಪೈಲಟ್‌ ಮೂಲಕ ಹಾರಾಡುವ, ಲ್ಯಾಪ್‌ ಆಧಾರಿತವಾಗಿ ಭೂಮಿಯಿಂದಲೇ ನಿಯಂತ್ರಣ ಮಾಡಬಹುದಾದ, ರಾಡಾರ್‌ ಗ್ರಹಿಕೆಗೆ ಸಿಗದಿರುವುದು ಸೇರಿ ಹಲವು ಅತ್ಯಾಧುನಿಕ ಸಾಮರ್ಥ್ಯವನ್ನು ಹೊಂದಿವೆ.

ಬೂಸ್ಟರ್ ಅನ್ನು ಅಡ್ವಾನ್ಸ್ಡ್ ಸಿಸ್ಟಮ್ಸ್ ಲ್ಯಾಬೊರೇಟರಿ ಮತ್ತು ನ್ಯಾವಿಗೇಷನ್ ಸಿಸ್ಟಮ್ ಅನ್ನು ಸಂಶೋಧನಾ ಕೇಂದ್ರ ಇಮಾರತ್ ವಿನ್ಯಾಸಗೊಳಿಸಿದೆ. ಮಾನ್ಯತೆ ಪಡೆದ ಏಜೆನ್ಸಿಗಳೊಂದಿಗೆ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ‘ಅಭ್ಯಸ್’ ಪ್ರಯೋಗಗಳ ಯಶಸ್ಸಿಗೆ ಡಿಆರ್​ಡಿಒ ಮತ್ತು ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!