ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಡೆಂಗ್ಯೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಚಿಕ್ಕಮಗಳೂರಿನಲ್ಲಿ ಡೆಂಗ್ಯೂಗೆ ಆರು ವರ್ಷದ ಮಗು ಮೃತಪಟ್ಟಿದೆ ಎಂದು ಹೇಳಲಾಗಿದೆ.
ಡೆಂಘೀ ಜ್ವರದ ಶಂಕೆ, ಚಿಕಿತ್ಸೆ ಫಲಿಸದೆ ಆರು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ. ರು ವರ್ಷದ ಸಾನಿಯಾ ಸಾವನ್ನಪ್ಪಿದ ಬಾಲಕಿ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.
ಮಗಳನ್ನು ಕಳೆದುಕೊಂಡ ತಂದೆ ಆಸಿಫ್ ರಾಜ್ಯ ಸರ್ಕಾರದ ವಿರುದ್ಧ ಬೇಸರ ಹೊರ ಹಾಕಿದ್ದು, ಬಾಲಕಿಯ ಮೃತ ದೇಹದ ಮುಂದೆ ನಿಂತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ನಾವು ಮಗುವನ್ನು ಕಳೆದುಕೊಂಡ ರೀತಿ ಯಾರೂ ಮಗುವನ್ನು ಕಳೆದುಕೊಳ್ಳಬಾರದು. ಉತ್ತಮ ಸೌಲಭ್ಯ ಬೇಕು. ಆರೋಗ್ಯ ಕ್ಷೇತ್ರವೇ ಹೀಗಿದ್ದರೆ ಹೇಗೆ? ಬಡವರಿಗೆ ಸೌಲಭ್ಯ ಕೊಡಿ ಸ್ವಾಮಿ ಎಂದು ಕಣ್ಣೀರಿಟ್ಟಿದ್ದಾರೆ.