ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದ ಬಳಿಕ ಭಾರತದ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಮರು ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಗಳು ಹರಿದಾಡುತ್ತಿರುತ್ತದೆ.
ಇತ್ತೀಚೆಗೆ ಟೀಮ್ ಇಂಡಿಯಾದ ಕ್ರಿಕೆಟಿಗ ಮೊಹಮ್ಮದ್ ಶಮಿ ಜತೆಗೆ ಸಾನಿಯಾ ಮಿರ್ಜಾ ಮದುವೆಯಾಗುತ್ತಾರೆ ಎಂಬ ಊಹಾಪೋಹಾ ಹಬ್ಬಿತ್ತು. ಈ ಬಗ್ಗೆ ಸಾನಿಯಾ ತಂದೆ ಇದು ಸುಳ್ಳು ಸುದ್ದಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುದ್ದಿಯನ್ನು ನಂಬಬೇಡಿ ಎಂದು ಸ್ಪಷ್ಟನೆ ನೀಡಿದ್ದರು.
ಎಲ್ಲ ಚರ್ಚೆಗಳ ಮಧ್ಯೆ ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಗ ಇಝಾನ್ ಜತೆಗಿನ ಹೃದಯಸ್ಪರ್ಶಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಟಿ-ಶರ್ಟ್ ಮತ್ತು ಕ್ಯಾಪ್ ತೊಟ್ಟು ಮಗನ ಜತೆಗೆ ಟೆನಿಸ್ ಕೋರ್ಟ್‌ನಲ್ಲಿ ಫೋಟೊ ಶೇರ್ ಮಾಡಿದ್ದಾರೆ. ಇಲ್ಲಿ ಇವರಿಬ್ಬರ ಫೋಟೊಕಿಂತ ಮಹತ್ವ ಪಡೆದದ್ದು ಸಾನಿಯಾ ಧರಿಸಿದ ಟಿ-ಶರ್ಟ್ ಮೇಲಿರುವ ಬರಹ. ಹೌದು ಸಾನಿಯಾ ಅವರು “ನಾನು ಚೆನ್ನಾಗಿರುತ್ತೇನೆ ಎಂಬ ಭಾವನೆ ನನಗೆ ಸಿಕ್ಕಿದೆ” ಎಂದು ಬರೆದಿರುವ ಟಿ-ಶರ್ಟ್ ಹಾಕಿದ್ದು ಈ ಮೂಲಕ ತಮ್ಮ ಜೀವನ ಶೈಲಿಯ ಬಗ್ಗೆ ಮಾತನಾಡುವವರಿಗೆ ಪರೋಕ್ಷವಾಗಿ ಉತ್ತರ ನೀಡಿದ್ದಾರೆ. ಜತೆಗೆ ಈ ಫೋಟೋಗೆ “YES” ಎಂಬ ಕ್ಯಾಪ್ಶನ್ ನೀಡಲಾಗಿದೆ.
ಹೀಗಾಗಿ ಇದೀಗ ಶಮಿ ಜತೆ ಸಾನಿಯ ಮದುವೆಯಾಗಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸಾನಿಯಾ ‘ಎಸ್’ ಬರೆದಿರುವುದು ಈಗ ನೆಟ್ಟಿಗರಿಗೆ ಆಹಾರವಾಗಿದೆ. ಶಮಿ ಜತೆಗಿನ ಮದುವೆಯ ಕುರಿತಾಗಿಯೇ ಅವರು ಎಸ್ ಎಂದು ಬರೆದುಕೊಂಡಿದ್ದಾರೆ ಎಂಬುದಾಗಿ ನೆಟ್ಟಿಗರು ಬಿಂಬಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಸಾನಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳಿಗೆ ‘ಸಬರ್ ಕರೋ ಆಲ್‌ವೇಸ್ ಸಬರ್ ಕರೋ…'(ಯಾವಾಗಲೂ ಕೊಂಚ ತಾಳ್ಮೆಯಿಂದ ಇರಿ) ಎಂದು ಬರೆದುಕೊಂಡಿದ್ದರು. ಅವರ ಈ ಮಾರ್ಮಿಕ ಪೋಸ್ಟ್ ಕಂಡು ನೆಟ್ಟಿಗರು ಸಾನಿಯಾ ಅವರು ಶಮಿ ಜತೆ ಹಸೆಮಣೆ ಏರುವುದು ಪಕ್ಕಾ ಎಂದು ಹೇಳಲಾರಂಭಿಸಿದ್ದರು. ಇದೀಗ ಎಸ್ ಎನ್ನುವ ಬರಹ ಮತ್ತೆ ಸದ್ದು ಮಾಡುತ್ತಿವೆ.