ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲೀಗ ‘ಕಲ್ಕಿ 2898 ಎಡಿ’ ಅಬ್ಬರ. ಜೂನ್ 27ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ‘ಕಲ್ಕಿ ‘ ಚಿತ್ರಕ್ಕೆ ಸಿನಿಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು, ರಿಲೀಸ್ ಆದ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿತು.
ಎರಡನೇ ದಿನ ಪೂರೈಸಿರುವ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ‘ಕಲ್ಕಿ’, ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆಗೆ ತಕ್ಕಂತೆ ಗಳಿಕೆ ಕಾಣುತ್ತಿದೆ.
ಮುಂಗಡ ಬುಕ್ಕಿಂಗ್ನಲ್ಲಿಯೇ ಅಬ್ಬರಿಸಿದ್ದ ‘ಕಲ್ಕಿ’ ಚಿತ್ರವು ಇದೀಗ ಬಾಕ್ಸ್ ಆಫೀಸ್ನಲ್ಲಿ ಎರಡನೇ ದಿನ ಕೂಡ ಉತ್ತಮ ಕಲೆಕ್ಷನ್ ಕಂಡಿದೆ. ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದ ಸಿನಿಮಾ, ಗಳಿಕೆಯಲ್ಲಿ ಕುಸಿತ ಕಾಣದೆ, ಮಿಂಚಿನ ಓಟ ಮುಂದುವರೆಸಿದೆ. ಪ್ರಸ್ತುತ 4ರಿಂದ 5 ಆಟಗಳನ್ನು ಆಯೋಜಿಸಿರುವ ಚಿತ್ರಮಂದಿರಗಳಲ್ಲಿ ಸಂಜೆ ಮತ್ತು ರಾತ್ರಿ ಶೋಗಳು ಪ್ರೇಕ್ಷಕರಿಂದ ಭರ್ತಿಯಾಗುತ್ತಿವೆ ಎಂದು ವರದಿಯಾಗಿದೆ.
ಜಾಗತಿಕ ಮಟ್ಟದಲ್ಲಿ ತೆರೆಕಂಡಿರುವ ಪ್ರಭಾಸ್ ಸಿನಿಮಾ ಎರಡನೇ ದಿನಕ್ಕೆ 300 ಕೋಟಿ ರೂ. ಕಲೆಕ್ಷನ್ ಕಂಡಿದೆ. ಎರಡು ದಿನಗಳ ಅವಧಿಯಲ್ಲಿ ಈ ವೇಗವನ್ನು ನೋಡಿರುವ ಚಿತ್ರ, ವಾರಾಂತ್ಯದಲ್ಲಿ 500 ಕೋಟಿ ರೂ. ಕ್ಲಬ್ ಸೇರುವುದು ಖಚಿತ ಎಂಬ ಸುದ್ದಿ ಸದ್ಯ ಟಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಉತ್ತರ ಅಮೆರಿಕಾ, ನಿಜಾಮ್ ಮತ್ತು ಉತ್ತರ ಭಾರತದಲ್ಲಿ ‘ಕಲ್ಕಿ’ ಯಶಸ್ವಿ ಪ್ರದರ್ಶನ ಕಾಣುತ್ತಿದೆ.