ಬೇಕಾಗುವ ಸಾಮಾಗ್ರಿ:
2 ಕಪ್-ನುಗ್ಗೆಸೊಪ್ಪು, 1 ಕಪ್- ಅಕ್ಕಿ ಹಿಟ್ಟು, 2 ಕಪ್ ಸಣ್ಣಕ್ಕೆ ಹೆಚ್ಚಿದ ಈರುಳ್ಳಿ, 2 ಹಸಿಮೆಣಸು-ಸಣ್ಣಕ್ಕೆ ಹೆಚ್ಚಿಕೊಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, 4 ಟೀ ಸ್ಪೂನ್ ಜೀರಿಗೆ, ಕಾಯಿತುರಿ-1/2 ಕಪ್, 1ಕಪ್-ನೀರು.
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ನುಗ್ಗೆಸೊಪ್ಪು, ಕಾಯಿತುರಿ, ಈರುಳ್ಳಿ, ಜೀರಿಗೆ, ಉಪ್ಪು, ಮೆಣಸಿನಕಾಯಿ ಮತ್ತು ತರಕಾರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಗ್ಯಾಸ್ ಮೇಲೆ ನೀರನ್ನು ಕುದಿಸಿ. ಈ ಹಿಟ್ಟಿನ ಮಿಶ್ರಣಕ್ಕೆ ಕ್ರಮೇಣ ಕುದಿಯುವ ನೀರನ್ನು ಸೇರಿಸಿ.
ನಂತರ ಒಂದು ತಟ್ಟೆಯಿಂದ ಮುಚ್ಚಿ ಮತ್ತು 10 ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ ರೊಟ್ಟಿಯನ್ನು ಬಟರ್ ಪೇಪರ್ ಅಥವಾ ಬಾಳೆ ಎಲೆಯಿಂದ ತಟ್ಟಿ, ತವಾಕ್ಕೆ ಹಾಕಿ ಎರಡು ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. ರುಚಿಕರ ನುಗ್ಗೆಸೊಪ್ಪು ಅಕ್ಕಿರೊಟ್ಟಿ ಸವಿಯಲು ಸಿದ್ದ.