ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಗೆದ್ದ ಭಾರತದ ಹೆಮ್ಮೆಯ ಟೀಂಗೆ ಲೋಕಸಭೆ ಕಡೆಯಿಂದ ʼಬಿಗ್ ಕಂಗ್ರಾಟ್ಸ್ʼ ಹೇಳಿದೆ.
ತಂಡಕ್ಕೆ ಲೋಕಸಭೆ ಅಭಿನಂದನೆ ಸಲ್ಲಿಸಿದ್ದು, ದೇಶದ ಯುವಕರು ಮತ್ತು ಕ್ರೀಡಾ ಪಟುಗಳು ಈ ಗೆಲುವಿನಿಂದ ಸ್ಫೂರ್ತಿ ಪಡೆಯುತ್ತಾರೆ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು. ಜೂ.29 ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್‍ಗಳಿಂದ ಸೋಲಿಸಿತ್ತು. ಈ ಮುಲಕ ಭಾರತ 17 ವರ್ಷಗಳ ನಂತರ ಟಿ 20 ವಿಶ್ವಕಪ್‍ನ್ನು ಗೆದ್ದುಕೊಂಡಿತ್ತು.