ಮೇಷ
ಆರೋಗ್ಯ ಸ್ಥಿರ. ಪ್ರಮುಖ ಕಾರ್ಯಕ್ಕೆ ಗಮನ ಕೊಡಲು ಇದರಿಂದ ಸಹಕಾರಿ. ಕಟು ಮಾತು ಮನೆಯಲ್ಲಿ ಸಂಬಂಧ ಕೆಡಿಸಬಹುದು.
ವೃಷಭ
ಇತ್ತೀಚಿನ ಸಮಸ್ಯೆ ಯಿಂದ ನಿರಾಳತೆ. ಕೆಲವರ ಜತೆ ವ್ಯವಹಾರದಲ್ಲಿ ಎಚ್ಚರವಿರಲಿ. ಜಗಳ, ನಷ್ಟ ಉಂಟಾದೀತು. ಕೋಪಕ್ಕೆ ವಿವೇಕ ಬಲಿಯಾಗದಿರಲಿ.
ಮಿಥುನ
ನೀವು ಕಾದಿಟ್ಟ ರಹಸ್ಯವೊಂದು ಬಹಿರಂಗ ಆದೀತು. ಆಪ್ತರ ಪ್ರತಿಕ್ರಿಯೆ ಅಚ್ಚರಿ ತಂದೀತು. ಆರೋಗ್ಯದ ಬಗ್ಗೆ ಗಮನ ಹರಿಸಿ.
ಕಟಕ
ಸಂಧಾನದ ದಾರಿಯಿಂದ ನೀವು ಕಾರ್ಯ ಸಾಽಸಬಲ್ಲಿರಿ. ಹಾಗಾಗಿ ಸಂಘರ್ಷದ ದಾರಿ ಏಕೆ? ವಿವೇಕದಿಂದ ಹೆಜ್ಜೆ ಇಡುವುದೊಳಿತು.
ಸಿಂಹ
ಸಿಹಿತಿನಿಸಿನ ಮೋಹ ಕಡಿಮೆ ಮಾಡಿ. ಆರೋಗ್ಯಕ್ಕೆ ಗಮನ ಕೊಡಿ. ಸಂಗಾತಿ ಜತೆ ಕಲಹ ನಡೆದೀತು. ವೃತ್ತಿಯಲ್ಲಿ ಏರುಪೇರು ಸಂಭವ.
ಕನ್ಯಾ
ನಿಮ್ಮ ಗುರಿಸಾಧನೆಗೆ ಅಡ್ಡಿಗಳು ಒದಗಬಹುದು. ಅನವಶ್ಯ ಮಾತು ಕಡಿಮೆಗೊಳಿಸಿ. ವೃತ್ತಿ ಸಂಬಂಽ ಪ್ರಯಾಣ. ಭಾವುಕ ಸನ್ನಿವೇಶ.
ತುಲಾ
ನೀವು ಹಿಡಿದ ದಾರಿ ಬಗ್ಗೆ ಖಚಿತತೆಯಿರಲಿ. ಮತ್ತೆ ಸಂದೇಹ ಬೇಡ. ಕೋಪ ನಿಮ್ಮ ಕೆಲಸ ಕೆಡಿಸದಂತೆ ಎಚ್ಚರ ವಹಿಸಿ. ಆರ್ಥಿಕ ಉನ್ನತಿ.
ವೃಶ್ಚಿಕ
ಆರಾಮದ ಬದುಕಿಗೆ ಧಕ್ಕೆ ಒದಗುವ ಪ್ರಸಂಗ ಉಂಟಾದೀತು. ದಿನವಿಡೀ ಓಡಾಟ ನಡೆಸುವ ಪರಿಸ್ಥಿತಿ. ಆಗದವರನ್ನು ಓಲೈಸಲು ಹೋಗಬೇಡಿ.
ಧನು
ಹಳೆಯ ಅನಾರೋಗ್ಯ ಮತ್ತೆ ಕಾಡಬಹುದು. ನಿಮ್ಮ ಪ್ರಯತ್ನ ನಿಷಲ ಮಾಡಲು ಕೆಲವರ ಪ್ರಯತ್ನ. ಅನವಶ್ಯ ಖರ್ಚು.
ಮಕರ
ದುಬಾರಿ ವಸ್ತು ಖರೀದಿಯ ಅವಕಾಶ. ವ್ಯವಹಾರದಲ್ಲಿ ಉನ್ನತಿ. ಆದರೂ ಮಾನಸಿಕ ಒತ್ತಡ ನಿವಾರಣೆಯಾಗದು. ಕೌಟುಂಬಿಕ ಉದ್ವಿಗ್ನತೆ.
ಕುಂಭ
ಆರೋಗ್ಯ ಕೆಡುವ ಮುನ್ನ ಎಚ್ಚರ ವಹಿಸಿ. ವ್ಯವಹಾರದಲ್ಲಿ ಹೊಸ ಅವಕಾಶ ವ್ಯರ್ಥ ಮಾಡಬೇಡಿ. ಕೌಟುಂಬಿಕ ಒತ್ತಡ ಹೆಚ್ಚಳ.
ಮೀನ
ಇಂದು ಚಿಂತಿಸುವ ಪ್ರಮೇಯ ಉದ್ಭವಿಸದು. ಎಲ್ಲವೂ ನಿರಾಳ. ವೃತ್ತಿ ಕಾರ್ಯ ಸುಲಲಿತ. ಆಪ್ತರ ಸಾಧನೆ ಸಂತೋಷ ತರಲಿದೆ. ಧನಪ್ರಾಪ್ತಿ.


