ವಾತಾವರಣದ ಬದಲಾವಣೆಯಿಂದಾಗಿ ಇದೀಗ ಎಲ್ಲೆಡೆ ಪುಟ್ಟ ಕಂದಮ್ಮಗಳಿಗೆ ಶೀತ, ಜ್ವರ, ಕೆಮ್ಮು ಬಾಧಿಸುತ್ತಿದೆ. ಸದ್ಯ ವಾತಾವರಣವೇ ಹಾಗಿದ್ದು, ಮಕ್ಕಳನ್ನು ಹೀಗೆ ಪ್ರೀತಿಯಿಂದ ನೋಡಿಕೊಳ್ಳಿ..
ಜ್ವರ, ಶೀತ, ಕೆಮ್ಮು, ನೆಗಡಿ ಏನೇ ಇರಲಿ ಮೊದಲು ವೈದ್ಯರನ್ನು ಭೇಟಿ ಮಾಡಿ
ಮಕ್ಕಳಿಗೆ ಶೀತ ಇರಬಹುದು ಆದರೆ ಜೊತೆಗೆ ಜ್ವರವೂ ಇದೆ ಅನ್ನೋದನ್ನು ಮರೆತು ಸ್ವೆಟರ್ ಹಾಕಬೇಡಿ, ಹೀಟ್ ದೇಹದಿಂದ ಹೊರಗೆ ಹೋಗೋಕೆ ಲೂಸ್ ಆದ ಕಾಟನ್ ಬಟ್ಟೆ ಹಾಕಿ
ಮಕ್ಕಳಿಗೆ ಸಿಟ್ರಸ್ ಹಣ್ಣುಗಳನ್ನು ನೀಡಿ, ಕಿತ್ತಳೆ ಹಣ್ಣು, ನಿಂಬೆ ಹಣ್ಣಿನ ಜ್ಯೂಸ್ ನೀಡಿ
ಆದಷ್ಟು ಹೆಚ್ಚು ನೀರು ಕುಡಿಸಿ, ಮಕ್ಕಳು ಮಾಮೂಲಿಯಂತೆ ಊಟ ತಿಂಡಿ ಮಾಡೋದಕ್ಕೆ ಆಗೋದಿಲ್ಲ, ಫೋರ್ಸ್ ಮಾಡಬೇಡಿ.
ಮಕ್ಕಳು ಪದೇ ಪದೆ ರೆಸ್ಟ್ ಮಾಡಲು ಬಯಸಿದರೆ ಮಲಗಲು ಬಿಡಿ, ಆಕ್ಟೀವ್ ಆಗಿರೋದಕ್ಕೆ ಫೋರ್ಸ್ ಮಾಡಬೇಡಿ. ಅವರಿಗೂ ಸಪ್ಪೆಯಾಗಿರೋದು ಇಷ್ಟ ಇಲ್ಲ.
ಕಫ ಹೋಗಿಸಲು ಮೂಗಿನಲ್ಲಿ ಸಲೈನ್ ವಾಟರ್ ಅಥವಾ ರೂಮಿನಲ್ಲಿ ಹ್ಯುಮಿಡಿಫೈರ್ ಇರುವಂತೆ ನೋಡಿಕೊಳ್ಳಿ.