Tuesday, January 13, 2026
Tuesday, January 13, 2026
spot_img

Rice series 85 | ಲಂಚ್ ಬಾಕ್ಸ್ ಗೆ ಫಟಾಫಟ್ ಅಂತ ರೆಡಿ ಮಾಡ್ಕೊಳಿ Coconut Mint Rice

ಒಂದೇ ರೀತಿಯಾಗಿರೋ ಬೆಳಗಿನ ತಿಂಡಿ ತಿಂದು ಬೋರ್ ಆಗಿದ್ರೆ, ಈ ತೆಂಗಿನ–ಪುದೀನಾ ರೈಸ್ ಹೊಸ ರುಚಿ ಕೊಡುತ್ತೆ. ಪುದೀನಾ ತಾಜಾತನ, ತೆಂಗಿನಕಾಯಿ ಸಿಹಿ ರುಚಿ ಸೇರಿ ಲೈಟ್ ಆದರೆ ಫ್ಲೇವರ್‌ಫುಲ್ ಬಾತ್ ರೆಡಿ ಆಗುತ್ತೆ.

ಬೇಕಾಗುವ ಪದಾರ್ಥಗಳು

ಬೇಯಿಸಿದ ಅನ್ನ – 2 ಕಪ್
ತುರಿದ ತೆಂಗಿನಕಾಯಿ – ½ ಕಪ್
ಪುದೀನಾ ಸೊಪ್ಪು – 1 ಕಪ್
ಹಸಿಮೆಣಸು – 2
ಶುಂಠಿ – 1 ಇಂಚು
ನಿಂಬೆಹಣ್ಣು ರಸ – 1 ಟೇಬಲ್ ಸ್ಪೂನ್
ಎಣ್ಣೆ – 2 ಟೇಬಲ್ ಸ್ಪೂನ್
ಸಾಸಿವೆ – 1 ಟೀ ಸ್ಪೂನ್
ಉದ್ದಿನ ಬೇಳೆ – 1 ಟೀ ಸ್ಪೂನ್
ಕಡಲೆ ಬೇಳೆ – 1 ಟೀ ಸ್ಪೂನ್
ಕರಿಬೇವು – ಸ್ವಲ್ಪ
ಉಪ್ಪು – ರುಚಿಗೆ

ತಯಾರಿಸುವ ವಿಧಾನ

ಪುದೀನಾ, ತೆಂಗಿನಕಾಯಿ, ಹಸಿಮೆಣಸು, ಶುಂಠಿ ಸ್ವಲ್ಪ ನೀರಿನಿಂದ ನಯವಾಗಿ ಪೇಸ್ಟ್ ಮಾಡಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವು ಸೇರಿಸಿ. ಈಗ ಪುದೀನಾ–ತೆಂಗಿನ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೂ 2–3 ನಿಮಿಷ ಬೇಯಿಸಿ. ಉಪ್ಪು ಸೇರಿಸಿ, ಬೆಂಕಿ ಆರಿಸಿ. ಈಗ ಬೇಯಿಸಿದ ಅನ್ನ ಹಾಕಿ ನಿಧಾನವಾಗಿ ಕಲಸಿ. ಕೊನೆಗೆ ನಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

Most Read

error: Content is protected !!