ಮೇಷ
ಗೊಂದಲಪೂರಿತ ಮನಸ್ಥಿತಿ. ಪ್ರಮುಖ ಕಾರ್ಯ ಹಿನ್ನಡೆ ಕಂಡೀತು. ಆಸಕ್ತಿಯ ಹವ್ಯಾಸ ಅನುಸರಿಸಿ. ಚರ್ಮದ ಅಲರ್ಜಿ ಉಂಟಾದೀತು.
ವೃಷಭ
ನೀವಿಂದು ನಿಮ್ಮ ನಡೆನುಡಿಯಲ್ಲಿ ಎಚ್ಚರ ವಹಿಸಬೇಕು. ಬಹಳಷ್ಟು ಜನ ನಿಮ್ಮ ಹಸ್ತಕ್ಷೇಪ ಬಯಸಲಾರರು. ನಿಮ್ಮ ಅವನತಿಗೆ ಅವರು ಯತ್ನಿಸುತ್ತಾರೆ.
ಮಿಥುನ
ಬಾಕಿ ಉಳಿದ ಕಾರ್ಯ ಇಂದು ಪೂರ್ಣಗೊಳಿಸಿ. ಅನವಶ್ಯ ವಿಳಂಬ ಸಲ್ಲದು. ಹೆತ್ತವರು ಮಕ್ಕಳ ಏಳಿಗೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಯಶ ಕಾಣುವರು.
ಕಟಕ
ಹೊಸ ವ್ಯವಹಾರ ಆರಂಭಿಸಲು ಯೋಜಿಸಿದ್ದರೆ ಸ್ವಲ್ಪ ಕಾಲ ತಡೆಯಿರಿ. ಈಗ ಕಾಲ ಪ್ರಶಸ್ತವಾಗಿಲ್ಲ. ಭಾವನಾತ್ಮಕ ಏರುಪೇರು ಅನುಭವಿಸುವಿರಿ.
ಸಿಂಹ
ಇತರರು ನಿಮ್ಮ ಕುರಿತು ಏನು ಹೇಳುತ್ತಾರೆಂದು ಚಿಂತಿಸಬೇಡಿ. ನಿಮ್ಮನ್ನು ಭಾವನಾತ್ಮಕವಾಗಿ ಹಚ್ಚಿ ಕೊಂಡಿರುವ ವ್ಯಕ್ತಿಯ ಮನಸ್ಸು ನೋಯಿಸುವ ಕಾರ್ಯ ಮಾಡದಿರಿ.
ಕನ್ಯಾ
ಉದ್ಯೋಗದಲ್ಲಿ ಮನಶ್ಯಾಂತಿ ಹಾಳು. ಸಹೋದ್ಯೋಗಿಗಳ ಕಿರಿಕಿರಿ. ಅನಿರೀಕ್ಷಿತ ಖರ್ಚು. ವಿದ್ಯಾರ್ಥಿಗೆ ಯಶಸ್ಸು. ಕೌಟುಂಬಿಕ ಅಸಹಕಾರ.
ತುಲಾ
ಕಷ್ಟದಲ್ಲಿ ಸಿಲುಕುವಿರಿ. ಆದರೆ ನಿಮಗೆ ನೆರವು ನೀಡಲು ಬಹಳಷ್ಟು ಮಂದಿ ಮುಂದೆ ಬರುವರು. ಅಗತ್ಯದ ವಸ್ತು ಖರೀದಿಸಲು ಕಾಲ ಸೂಕ್ತವಾಗಿದೆ.
ವೃಶ್ಚಿಕ
ಆತ್ಮೀಯರೊಂದಿಗೆ ಹೊಣೆಯರಿತು ವರ್ತಿಸಿ. ನಿಮ್ಮ ನಡೆನುಡಿ ತಪ್ಪರ್ಥ ಕಲ್ಪಿಸದಂತೆ ನೋಡಿ. ವಾಹನ ಚಾಲನೆಯಲ್ಲಿ ಎಚ್ಚರ ವಹಿಸಿ. ಅಧಿಕ ಖರ್ಚು ಸಂಭವ.
ಧನು
ವಾದವಿವಾದದಿಂದ ಇಂದು ದೂರವಿರಿ. ದೊಡ್ಡ ಖರ್ಚು ನಿಮಗಿಂದು ಕಾದಿದೆ. ಇತರರ ಖಾಸಗಿ ವಿಷಯದ ಕುರಿತು ಮೂಗು ತೂರಿಸದಿರಿ.
ಮಕರ
ನಿಮ್ಮನ್ನು ವಿರೋಧಿಸಿದ ಮಂದಿ ನಿಮಗೆ ಬೆನ್ನು ಬಾಗುವರು. ಕಠಿಣ ಕಾರ್ಯದಲ್ಲಿ ಸಫಲತೆ ಸಿಗಲಿದೆ. ಮಾನಸಿಕ ಒತ್ತಡ ನಿವಾರಣೆಗೆ ಕ್ರಮ ತೆಗೆದುಕೊಳ್ಳಿ.
ಕುಂಭ
ನಿಮ್ಮ ವಿಶ್ವಾಸ ವೃದ್ಧಿಸುವ ಬೆಳವಣಿಗೆ ಇಂದು ಸಂಭವಿಸುವುದು. ಸಮಸ್ಯೆಯೊಂದು ಪರಿಹಾರ ಕಾಣುವುದು. ಸಾಂಸಾರಿಕ ಬಿಕ್ಕಟ್ಟು ನಿವಾರಣೆ.
ಮೀನ
ಯೋಜನಾಬದ್ಧವಾಗಿ ನೀವಿಂದು ಕಾರ್ಯ ನಿರ್ವಹಿಸುವಿರಿ. ಆದರೂ ವ್ಯವಹಾರ ನಿಧಾನ. ನಿರೀಕ್ಷಿತ ಫಲ ಸಿಗದು. ಕೌಟುಂಬಿಕ ಒತ್ತಡ ಹೆಚ್ಚು.