ಹೊಸದಿಗಂತ ವರದಿ ರಾಣೇಬೆನ್ನೂರು:
ಅತಿಯಾದ ಮದ್ಯೆ ಸೇವಿಸಿ ಬೈಕ್ ಚಲಾಯಿಸುವಾಗ ರಸ್ತೆಯ ಡಿವೈಂಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಯುವಕರು ಮೃತಪಟ್ಟ ಘಟನೆ ನಗರದ ನೇಕಾರ ಕಾಲೋನಿ ಬಳಿ ಇರುವ ಹಳೆ ಪಿಬಿ ರಸ್ತೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಮೃತರನ್ನು ಹರಳಯ್ಯನಗರದ ನಂದನ ಶಿವಪ್ಪನವರ(22) ವೈಭವ ಪಟ್ಟಣಶೆಟ್ಟಿ(22) ಎಂದು ಗುರುತಿಸಲಾಗಿದೆ. ತಡರಾತ್ರಿ ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗುವ ಸಂದರ್ಭದಲ್ಲಿ ಬೈಕ್ ಡಿವೈರ್ ಗೆ ಹೊಡೆದು ರಸ್ತೆಯ ಮೇಲೆ ಬಿದ್ದು ಇಬ್ಬರೂ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ