ಪ್ರತೀ ತಿಂಗಳಲ್ಲಿ ಹುಟ್ಟಿದವರಿಗೂ ವಿಭಿನ್ನವಾದ ಗುಣಗಳು ಇರುತ್ತವೆ. ಅದರಿಂದಲೇ ಪ್ರತೀ ವ್ಯಕ್ತಿಯೂ ವಿಭಿನ್ನ ಎನಿಸುತ್ತಾರೆ. ಜುಲೈನಲ್ಲಿ ಹುಟ್ಟಿದವರ ಗುಣಲಕ್ಷಣಗಳು ಹೇಗಿದೆ ನೋಡಿ..
ಏನಾದ್ರೂ ಎಕ್ಸೈಟ್ ಆಗುವ ವಿಷಯ ಅಥವಾ ಟೆನ್ಶನ್ ಆಗುವ ವಿಷಯ ಬಿಟ್ಟು ಇನ್ನೆಲ್ಲಾ ಸಮಯದಲ್ಲೂ ಮಾತು ಕಮ್ಮಿ.
ಅವರ ಬಗ್ಗೆ ಅವರಿಗೆ ಅಪಾರ ಹೆಮ್ಮೆ, ತಮ್ಮನ್ನು ತಾವು ಎಂದಿಗೂ ಬಿಟ್ಟುಕೊಡಲ್ಲ.
ಇವರು ದುಃಖದಲ್ಲಿದ್ದರೆ ಸಮಾಧಾನ ಮಾಡೋದು ಸುಲಭ.
ಸಿಕ್ಕಾಪಟ್ಟೆ ಸೀಕ್ರೆಟ್ ಮೇಂಟೇನ್ ಮಾಡ್ತಾರೆ, ಬಾಯಿ ಬಿಡಿಸೋದು ಕಷ್ಟ.
ಯಾವುದೇ ವಿಷಯದಲ್ಲಿಯೂ ಸುಳ್ಳು, ಮೋಸ ಇಲ್ಲ, ಇದ್ದದ್ದನ್ನು ಇದ್ದಂತೆಯೇ ಹೇಳ್ತಾರೆ.
ಇವರ ಬಳಿ ಯಾವುದೇ ವಿಷಯ ಮಾತನಾಡಬೇಕಂದ್ರೆ ಈಸಿಯಾಗಿ ಮಿಂಗಲ್ ಆಗ್ತಾರೆ, ಮಾತನಾಡುವಷ್ಟು ಸ್ಪೇಸ್ ಮಾಡಿಕೊಡ್ತಾರೆ.
ಅತೀ ಉತ್ತಮ ಸ್ನೇಹಿತರು, ಹಾಗೇ ಒಮ್ಮೆ ಒಬ್ಬ ವ್ಯಕ್ತಿ ಬೇಡ ಎನಿಸಿದರೆ ಮತ್ತೆ ಅವರ ಕಡೆ ಹೋಗೋದಿಲ್ಲ.
ಬೇರೆಯವರ ಭಾವನೆಗಳ ಬಗ್ಗೆ ಸದಾ ಚಿಂತೆ ಮಾಡ್ತಾರೆ.
ಮೂಡಿಯಾಗಿರ್ತಾರೆ, ಸಣ್ಣ ವಿಷಯಗಳಿಗೂ ಬೇಜಾರಾಗ್ತಾರೆ. ಸೆಂಟಿಮೆಂಟಲ್ ಫೂಲ್ಸ್ ಅನ್ಬೋದು.
ಎಲ್ಲರನ್ನೂ ಕ್ಷಮಿಸ್ತಾರೆ, ಬಟ್ ಅವರು ಮಾಡಿದ ಕೆಲಸವನ್ನು ಮರೆಯೋದಿಲ್ಲ.
ನಾನ್‌ಸೆನ್ಸ್ ಹಾಗೂ ಉಪಯೋಗಕ್ಕೆ ಬಾರದ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ.
ಮೆಂಟಲಿ, ಫಿಸಿಕಲಿ ಉತ್ತಮವಾಗಿ ಗೈಡ್ ಮಾಡ್ತಾರೆ.
ತುಂಬಾ ಕಷ್ಟಪಟ್ಟು ಕೆಲಸ ಮಾಡ್ತಾರೆ, ಕಷ್ಟಪಟ್ಟ ಅನ್ನ ಮಾತ್ರ ತಿಂತಾರೆ.
ಇಷ್ಟಪಟ್ಟ ಕೆಲಸ ಮಾತ್ರ ಮಾಡ್ತಾರೆ, ಕೆಲಸದ ಜಾಗವನ್ನೂ ಪ್ರೀತಿಸ್ತಾರೆ, ಎಲ್ಲರನ್ನೂ ಒಪ್ಪಿಕೊಳ್ತಾರೆ, ಜಡ್ಜ್ ಮಾಡೋದಿಲ್ಲ.
ಎಮೋಷನಲ್ ಮ್ಯಾನೇಜ್‌ಮೆಂಟ್ ಕಷ್ಟ, ಕೆಲವೊಮ್ಮೆ ಕೆಟ್ಟ ನಿರ್ಧಾರ ಕೈಗೊಳ್ತಾರೆ.