ಜುಲೈ 23ಕ್ಕೆ ಆರ್ಥಿಕ ಸಮೀಕ್ಷೆ, ಜುಲೈ 24ಕ್ಕೆ ಬಜೆಟ್ ಮಂಡನೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜುಲೈ 23ಕ್ಕೆ ಆರ್ಥಿಕ ಸಮೀಕ್ಷೆ, ಜುಲೈ 24ಕ್ಕೆ ಬಜೆಟ್ ಮಂಡನೆ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಜುಲೈ 22ರಂದು ಬಜೆಟ್‌ ಮಂಡನೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ   ಫೈನಾನ್ಷಿಯಲ್ ಎಕ್ಸ್​ಪ್ರೆಸ್ ಪತ್ರಿಕೆಯ ವರದಿ ಪ್ರಕಾರ ಜುಲೈ 24ರಂದು ಸಂಸತ್ತಿನಲ್ಲಿ ಪೂರ್ಣ ಪ್ರಮಾಣದ ಮುಂಗಡ ಪತ್ರ ಮಂಡನೆ ಆಗಬಹುದು ಎನ್ನಲಾಗಿದೆ.

ಈ ವರದಿ ಪ್ರಕಾರ ಜುಲೈ 22ಕ್ಕೆ ಬಜೆಟ್ ಅಧಿವೇಶನ ಆರಂಭವಾಗಬಹುದು. ಜುಲೈ 23ಕ್ಕೆ ಆರ್ಥಿಕ ಸಮೀಕ್ಷಾ ವರದಿ ಬಿಡುಗಡೆ ಆಗಬಹುದು. ಜುಲೈ 24ಕ್ಕೆ ಯೂನಿಯನ್ ಬಜೆಟ್ ಅನ್ನು ಪ್ರಸ್ತುತಪಡಿಸಬಹುದು ಎನ್ನಲಾಗಿದೆ. ಶೀಘ್ರದಲ್ಲೇ ದಿನಾಂಕ ಪ್ರಕಟಿಸುವ ನಿರೀಕ್ಷೆ ಇದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!