ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ವೃತ್ತಿಯಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಅದರಿಂದ ಲಾಭ ಪಡೆಯುವಿರಿ. ಉದರ ಸಂಬಂಧಿ ಸಮಸ್ಯೆ ಬಾಧೆ. ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿರಿ.

ವೃಷಭ
ನಿಮ್ಮ ಕ್ಷೇತ್ರದಲ್ಲಿ, ಕ್ರೀಡೆಯಲ್ಲಿ ಎಲ್ಲರು ಮೆಚ್ಚುವ ಸಾಧನೆ ತೋರುವಿರಿ. ನಿಮಗೆ ಹಾನಿ ತರಲು ಯತ್ನಿಸುವ ಜನರನ್ನು ಕಡೆಗಣಿಸಿ. ಸಂಘರ್ಷ ಬೇಡ.

ಮಿಥುನ
ನಿಮ್ಮ ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ಸಂಭವಿಸುವ ಬದಲಾವಣೆ ಕುರಿತು ಎಚ್ಚರದಿಂದಿರಿ. ಅದಕ್ಕೆ ಸೂಕ್ತವಾಗಿ ಉಪಕ್ರಮ ತೆಗೆದುಕೊಳ್ಳಿ.

ಕಟಕ
ಹಣದ ವಿಚಾರದಲ್ಲಿ ಶಿಸ್ತು ಪಾಲಿಸಿ. ಬೇಕಾಬಿಟ್ಟಿ ಖರ್ಚು ಸಮಸ್ಯೆ ತಂದೀತು. ಹೆತ್ತವರ ಹಿತಾಸಕ್ತಿಗೆ ಗಮನ ಕೊಡಿ. ಕೌಟುಂಬಿಕ ಅಶಾಂತಿ.

ಸಿಂಹ
ನಿರುತ್ಸಾಹ  ತುಂಬಿದ ದಿನ. ವೃತ್ತಿಯಲ್ಲಿ ಹಿನ್ನಡೆ. ನೀವು ಮಾಡದ ತಪ್ಪಿಗೆ ಆರೋಪ ಎದುರಿಸುವಿರಿ. ಚರ್ಮದ  ಅಲರ್ಜಿ ಉಂಟಾದೀತು.

ಕನ್ಯಾ
ನಿಮಗೆ ಲಾಭ ತರುವ ಯೋಜನೆಯೊಂದು ಸಿಗಲಿದೆ. ನಿಮ್ಮ ಮನಶ್ಯಾಂತಿ ಕದಡಿದ್ದ ವಿಷಯವು ಇತ್ಯರ್ಥ ಕಾಣುವುದು. ಬಂಧು ಭೇಟಿಯಿಂದ ಖುಷಿ.

ತುಲಾ
ನಿಮ್ಮ ಮೇಲೆ ನೀವೇ ಒತ್ತಡ ಹಾಕುತ್ತಿದ್ದೀರಿ. ಅದನ್ನು ತಪ್ಪಿಸಿ. ಎಲ್ಲವನ್ನು ನಿರಾಳವಾಗಿ ಮಾಡಿ. ಪ್ರೀತಿಯ ವಿಷಯದಲ್ಲಿ  ಸಂತೋಷ ತರುವ ಬೆಳವಣಿಗೆ.

ವೃಶ್ಚಿಕ
ಕೌಟುಂಬಿಕ ವಿಷಯಕ್ಕೆ ಇಂದು ಆದ್ಯತೆ ಕೊಡಿ. ನಿಮ್ಮ ಪ್ರಗತಿಗೆ ಅಸೂಯೆ ಪಡುವ ಜನರ ಕುರಿತು ಎಚ್ಚರವಿರಲಿ. ಅವರಿಂದ ಹಾನಿ ಉಂಟಾದೀತು. ನಿರುದ್ವಿಗ್ನರಾಗಿರಿ.

ಧನು
ಅತಿಯಾದ ಕೆಲಸದಿಂದ ಆರೋಗ್ಯ ಸಮಸ್ಯೆ ಉಂಟಾದೀತು. ಅದಕ್ಕೆ ಅವಕಾಶ ಕೊಡದಿರಿ. ಸಣ್ಣ ವಿಷಯಕ್ಕೂ ಅತಿಯಾಗಿ ಚಿಂತಿಸಲು ಹೋಗದಿರಿ.

ಮಕರ
ತಮ್ಮ ಸ್ವಾರ್ಥಕ್ಕೆ ಕೆಲವರು ನಿಮ್ಮನ್ನು ಬಳಸಿಕೊಂಡಾರು. ಅದಕ್ಕೆ ಆಸ್ಪದ ಕೊಡದಿರಿ. ಹಣದ ವಿಚಾರದಲ್ಲಿ ಸರಿಯಾಗಿ ಯೋಚಿಸಿ ನಿರ್ಧಾರ ತಾಳಿ.

ಕುಂಭ
ನಿಮ್ಮ ವರ್ತನೆಗೆ ನೀವೇ ಜವಾಬ್ದಾರಿ. ಬೇರೆಯವರ ಮೇಲೆ ಆರೋಪ ಹೊರಿಸಲು ಹೋಗದಿರಿ. ಅನ್ಯರ ಜತೆ ಸಂಘರ್ಷಕ್ಕೆ ಇಳಿಯದಿರಿ.

ಮೀನ
ವೃತ್ತಿಯ ಒತ್ತಡ ಕಡಿಮೆ. ಹಾಗಾಗಿ ನಿಮಗೆ ಸಾಕಷ್ಟು ಪುರುಸೊತ್ತು ಸಿಗುವುದು. ನಿಮ್ಮ ಇಷ್ಟದ ಕಾರ್ಯ ಮಾಡಲು ಮುಂದಾಗಿ. ಆರ್ಥಿಕ ಉನ್ನತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!